ಸೈನಿಕರ ಜೀವನ ಇತರರಿಗೆ ಮಾದರಿ: ಕ್ಯಾ.ಗಣೇಶ್ ಕಾರ್ಣಿಕ್‌

| Published : Jul 27 2024, 12:54 AM IST

ಸಾರಾಂಶ

ಮಾಜಿ ಸೈನಿಕರ ಸಂಘ ಸಹಯೋಗದಲ್ಲಿ ಕದ್ರಿ ಯುದ್ದ ಸ್ಮಾರಕದಲ್ಲಿ ಕಾರ್ಗಿಲ್‌ ವಿಜಯ ದಿವಸ್‌ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಸೈನಿಕರನ್ನು ಸ್ಮರಿಸುವುದು ಕರ್ತವ್ಯ. ಸೈನಿಕರ ಬಲಿದಾನ ವ್ಯರ್ಥವಾಗಬಾರದು ಎಂದು ಎಂದು ನಿವೃತ್ತ ಸೈನಿಕ ಕ್ಯಾ. ಗಣೇಶ್‌ ಕಾರ್ಣಿಕ್‌ ಹೇಳಿದರು.ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ಮಾಜಿ ಸೈನಿಕರ ಸಂಘ ಸಹಯೋಗದಲ್ಲಿ ಕದ್ರಿ ಯುದ್ದ ಸ್ಮಾರಕದಲ್ಲಿ ನಡೆದ ಕಾರ್ಗಿಲ್‌ ವಿಜಯ ದಿವಸ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಂದಿನ ಪ್ರಧಾನಿ ವಾಜಪೇಯಿ ಅವರು ಪಾಕ್‌ ಜತೆ ಶಾಂತಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದ ಸಂದರ್ಭವೇ ಪಾಕಿಸ್ತಾನ ಕಾರ್ಗಿಲ್‌ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ಕಳುಹಿಸಿತ್ತು. ಮೇ 5ರಂದು ಕಾರ್ಗಿಲ್‌ ಯುದ್ಧ ಆರಂಭವಾಗಿ ಜುಲೈ 26 ರಂದು ಕೊನೆಗೊಂಡಿತ್ತು. ಸುಮಾರು 500ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಪ್ರಸ್ತುತ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಕಣ್ಮರೆಯಾಗುತ್ತಿದೆ. ವಿದ್ಯಾವಂತ ಯುವಕರು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸುವ ಜತೆಗೆ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಇಂತಹವರಿಗೆ ಸೈನಿಕನ ಜೀವನ ಮಾದರಿ ಆಗಬೇಕು ಎಂದರು.ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೀಪಕ್‌ ಅಡ್ಯಂತಾಯ, ಉಪಾಧ್ಯಕ್ಷ ಕರ್ನಲ್‌ ಜಯಚಂದ್ರ, ಕೋಶಾಧಿಕಾರಿ ಸುಧೀರ್‌ ಪೈ, ಹಿರಿಯರಾದ ಕರ್ನಲ್‌ ಶರತ್‌ ಭಂಡಾರಿ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಉಪಮೇಯರ್‌ ಸುನಿತಾ ಮತ್ತಿತರಿದ್ದರು.

ಶ್ರೀಕಾಂತ್‌ ಶೆಟ್ಟಿಸ್ವಾಗತಿಸಿದರು, ಸಚಿತಾ ನಂದಗೋಪಾಲ್‌ ನಿರೂಪಿಸಿದರು.