ಸಾರಾಂಶ
- ರಾಜ್ಯಮಟ್ಟದ ಬೂಚಿ ಪಂದ್ಯಾವಳಿ ಉದ್ಘಾಟನೆ - - -
ಕನ್ನಡಪ್ರಭ ವಾರ್ತೆ, ದಾವಣಗೆರೆರಾಜ್ಯದ ದಿವ್ಯಾಂಗರ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಕ್ರಾಂತಿಯೇ ಆಗುತ್ತಿದೆ. ರಾಜ್ಯದ ಮಕ್ಕಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 30 ಚಿನ್ನ, 25 ಬೆಳ್ಳಿ ಹಾಗೂ 15 ಕಂಚಿನ ಪದಕಗಳ ಪಡೆಯುವ ಮೂಲಕ ಕ್ರೀಡಾ ಕ್ಷೇತ್ರದ ಕ್ರಾಂತಿಗೆ ಸಾಕ್ಷಿಯಾಗುತ್ತಿದ್ದಾರೆ ಎಂದು ಸ್ಪೆಷಲ್ ಒಲಿಂಪಿಕ್ಸ್ ಭಾರತ್‌ನ ಕರ್ನಾಟಕದ ರಾಜ್ಯಾಧ್ಯಕ್ಷೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕದ ಜಿಲ್ಲಾ ಘಟಕ, ಅಂಗವಿಕಲರ ಆಶಾಕಿರಣ ಟ್ರಸ್ಟ್, ಸಂವೇದ ತರಬೇತಿ ಮತ್ತು ಸಂಶೋಧನಾ ಕೇಂದ್ರದಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೂಚಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ದಿವ್ಯಾಂಗ ಮಕ್ಕಳ ಕ್ರೀಡಾ ತರಬೇತಿಗೆಂದೇ ವಿಶೇಷ ತರಬೇತುದಾರರ ನೇಮಕ ಮಾಡಲಾಗಿದೆ. ಇದರಿಂದಾಗಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ವಿಶೇಷ ಮಕ್ಕಳು ಗಮನಾರ್ಹ ಸಾಧನೆ ಮಾಡುತ್ತಿರುವುದು ಆಶಾದಾಯಕ ಸಂಗತಿ. ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತದ 205 ಮಕ್ಕಳು ಅನೇಕ ಪದಕ ಪಡೆದಿದ್ದಾರೆ. ಅದರಲ್ಲಿ ಕರ್ನಾಟಕದ ಮಕ್ಕಳು 13 ಚಿನ್ನ, 2 ಬೆಳ್ಳಿ ಪದಕ ಗಳಿಸುವ ಮೂಲಕ ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತಂದಿದ್ದಾರೆ. ಬೂಚಿ ಸ್ಪರ್ಧೆ ವಿಜೇತರಾದ ವಿಶೇಷ ಮಕ್ಕಳು ಸೆ.5ರಂದು ಗ್ವಾಲಿಯರ್‌ನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯುವರು ಎಂದು ವಿವರಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಸ್ಪೆಷಲ್ ಒಲಿಂಪಿಕ್ಸ್ ಭಾರತ ಕರ್ನಾಟಕದ ಖಜಾಂಚಿ ನಾಗರಾಜ ಶಿವನಪ್ಪನವರ, ಜಿಲ್ಲಾಧ್ಯಕ್ಷ ರಮಣಲಾಲ್ ಪಿ. ಸಂಘವಿ, ರೂಪ್ ಸಿಂಗ್, ಅಮರೇಂದ್ರ ಅಂಜಿನಪ್ಪ, ಹೀರಾವತಿ, ಶಾಂತಾ ಭಟ್, ಡಾ. ಎನ್.ಪಿ. ಸುರೇಂದ್ರನಾಥ ನಿಶಾನಿಮಠ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಡಾ. ಕೆ.ಕೆ.ಪ್ರಕಾಶ, ನಾಗರಾಜ ಇತರರು ಇದ್ದರು.- - -
ಟಾಪ್ ಕೋಟ್ದಿವ್ಯಾಂಗ ಮಕ್ಕಳು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಹಮ್ಮಿಕೊಂಡಿರುವ ಒಲಿಂಪಿಕ್ಸ್ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಬೇಕು. ಇದೇ ಸಂಸ್ಥೆ ಹಾಗೂ ನಮ್ಮೆಲ್ಲರ ಉದ್ದೇಶವೂ ಆಗಿದೆ - ಶಶಿಕಲಾ ಜೊಲ್ಲೆ, ಮಾಜಿ ಸಚಿವೆ,
ಅಧ್ಯಕ್ಷೆ, ಸ್ಪೆಷಲ್ ಒಲಂಪಿಕ್ಸ್ ಭಾರತ್-ಕರ್ನಾಟಕ- - - -29ಕೆಡಿವಿಜಿ4:
ರಾಜ್ಯಮಟ್ಟದ ಬೂಚಿ ಪಂದ್ಯಾವಳಿಯನ್ನು ಸ್ಪೆಷಲ್ ಒಲಿಂಪಿಕ್ಸ್ ಭಾರತ್- ಕರ್ನಾಟಕದ ರಾಜ್ಯಾಧ್ಯಕ್ಷೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು.