ರೈತರನ್ನು ಒಕ್ಕಲೆಬ್ಬಿಸುವ ರಾಜ್ಯ ಸರ್ಕಾರ

| Published : Oct 14 2024, 01:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರದಲ್ಲಿ ಶೇ.50 ಕ್ಕಿಂತ ಹೆಚ್ಚು ಆಸ್ತಿ ಒತ್ತುವರಿ ಆಗಿದೆಂದು ನೂರಾರು ವರ್ಷಗಳಿಂದ ಇಲ್ಲಿನ ರೈತರು ಉಳುತ್ತಿರುವ ಭೂಮಿಯನ್ನು ನೋಟಿಸ್ ನೀಡಿ ವಕ್ಫ್ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಈಗಾಗಲೇ, ರೈತರಿಗೆ, ಖಾಸಗಿ ವ್ಯಕ್ತಿಗಳಿಗೆ ನೋಟಿಸ್‌ ನೀಡಿದ್ದು ಪ್ರಕ್ರಿಯೆ ಶುರುವಾಗಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ. ಸುಮಾರು 30-40 ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರದಲ್ಲಿ ಶೇ.50 ಕ್ಕಿಂತ ಹೆಚ್ಚು ಆಸ್ತಿ ಒತ್ತುವರಿ ಆಗಿದೆಂದು ನೂರಾರು ವರ್ಷಗಳಿಂದ ಇಲ್ಲಿನ ರೈತರು ಉಳುತ್ತಿರುವ ಭೂಮಿಯನ್ನು ನೋಟಿಸ್ ನೀಡಿ ವಕ್ಫ್ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಈಗಾಗಲೇ, ರೈತರಿಗೆ, ಖಾಸಗಿ ವ್ಯಕ್ತಿಗಳಿಗೆ ನೋಟಿಸ್‌ ನೀಡಿದ್ದು ಪ್ರಕ್ರಿಯೆ ಶುರುವಾಗಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ. ಸುಮಾರು 30-40 ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.

ಪ್ರಕಟಣೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ದೇಶದ ಬೆಳವಣಿಗೆಗೆ ಕಿಂಚಿತ್ತೂ ಕೊಡುಗೆಯಿಲ್ಲದ ವಕ್ಫ್ ಇಲಾಖೆಗೆ ರೈತರು ಭೂಮಿ ನೀಡಬೇಕು ಎಂದು ನೋಟಿಸ್‌ ನೀಡಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದು ಅನ್ನದಾತನಿಗೆ ಮಾಡುವ ಅನ್ಯಾಯ. ಜಾತಿ, ಮತ, ಕುಲ ನೋಡದೆ ಎಲ್ಲರಿಗೂ ಅನ್ನ ನೀಡುವವನ ಭೂಮಿಯೇ ಕಿತ್ತುಕೊಂಡು ಯಾವುದೋ ಒಂದು ಸಮುದಾಯದ ಅಭಿವೃದ್ಧಿಗೆ ದೇಶದ ಸಂಪತ್ತನ್ನು ಬಿಟ್ಟು ಕೊಡಬೇಕು ಎನ್ನುವುದು ಅತಾರ್ಕಿಕವಾಗಿದೆ. ಕಳೆದ 30-40 ವರ್ಷಗಳಲ್ಲಿ ಇರದ ಭೂ ವ್ಯಾಜ್ಯ ಧುತ್ತನೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಉದ್ಭವಿಸುತ್ತಿರುವುದು ಗಮನಾರ್ಹ ಎಂದು ಅಸಮಧಾನ ಹೊರಹಾಕಿದ್ದಾರೆ.

ವಿಜಯಪುರದಲ್ಲಿರುವ ಪೊಲೀಸ್ ಕಟ್ಟಡಗಳೂ ನಮ್ಮದೆಂದು ವಕ್ಫ್ ಹೇಳಿದೆ. ಈ ರೀತಿ ಸಾರ್ವಜನಿಕರಿಗೆ ಕಟ್ಟಿರುವ ಕಟ್ಟಡಗಳು, ಸರ್ಕಾರಿ ಕಚೇರಿಗಳು, ರೈತರ ಭೂಮಿಗಳನ್ನು ಬಿಟ್ಟುಕೊಡಬೇಕೆಂದು ಹೇಳುವ ನಿರಂಕುಶ ಪ್ರಭುತ್ವದಲ್ಲಿ ನಮ್ಮ ದೇಶ ಇಲ್ಲ. ಈ ದೇಶದ ಸಂಪತ್ತಿನ ಮೇಲೆ ಎಲ್ಲರಿಗೂ ಸಮಾನವಾದ ಹಕ್ಕಿದೆ. 30-40 ವರ್ಷಗಳಲ್ಲಿ ಇಲ್ಲದ ಸಮಸ್ಯೆ ಈಗೇಕೆ. ಅಷ್ಟಕ್ಕೂ, ವಕ್ಫ್ ನಿಂದ ಸಮಾಜಕ್ಕೆ ಉಪಯೋಗ ಏನಿದೆ? ಅಸಲಿಗೆ, ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲೇ ಇಲ್ಲದ ಕಾನೂನುಗಳು ಇಲ್ಲೇಕೆ ?. ಈ ದೇಶದ ಬೆನ್ನೆಲುಬಾದ ರೈತರ ಭೂಮಿ ನಮ್ಮದು ಅಂತ ಹೇಳಿ ಅವರಿಗೆ ನೋಟಿಸ್‌ ನೀಡಿ ಅವರಿಗೆ ಮಾನಸಿಕವಾಗಿ ಜರ್ಜರಿತರಾಗಿ ಮಾಡುತ್ತಿರುವ ವಕ್ಫ್ ಬೋರ್ಡ್‌ನ ಕ್ರಮ ಅಮಾನವೀಯವಾಗಿದೆ. ರೈತನಿದ್ದರೇ ದೇಶ ಎಂಬುವುದು ಇವರಿಗೆ ಇನ್ನೂ ಅರ್ಥವಾಗಿಲ್ಲ ಎಂದು ಕಿಡಿಕಾರಿದ್ದಾರೆ.ಈ ಹಿಂದೆ ಮುಸಲ್ಮಾನ ದೊರೆಗಳು ನಮ್ಮ ದೇಶವನ್ನು ಲೂಟಿ ಹೊಡೆದ ರೀತಿಯಲ್ಲೇ ವಕ್ಫ್ ಬೋರ್ಡ್ ಸರ್ಕಾರ ಹಾಗೂ ಸರ್ಕಾರೇತರ ಆಸ್ತಿ ನಮ್ಮದು ಎಂದು ಹೇಳುತ್ತಿದೆ. ದೇಶದ ಸಂಪನ್ಮೂಲದ ಮೇಲೆ ಎಲ್ಲರಿಗೂ ಸಮಾನ ಹಕ್ಕಿದೆ. ಇದು ರೈತರಿಗೂ ಅನ್ವಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೋಟ್‌.

ವಕ್ಫ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅ.15 ರಂದು ನಮ್ಮ ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ವಕ್ಫ್ ಹಾಗೂ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನ್ಯಾಯ, ಅಕ್ರಮ, ಅನೀತಿ, ಅಕೃತ್ಯಗಳನ್ನು ಪಕ್ಷಾತೀತ, ಧರ್ಮಾತೀತವಾಗಿ ಪ್ರತಿಭಟಿಸಲಿದ್ದೇವೆ. ವಿಜಯಪುರದ ಪ್ರಜ್ಞಾವಂತ ನಾಗರೀಕ ಬಂಧುಗಳು, ರೈತರು ಇದರಲ್ಲಿ ಭಾಗವಹಿಸಲಿದ್ದಾರೆ.

-ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕರು.