ಸಾರಾಂಶ
ಕೊರಟಗೆರೆ ಪಟ್ಟಣದ ರವೀಂದ್ರ ಭಾರತಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ರೆಹಮಾನ್ (೧೫)ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣದ ರವೀಂದ್ರ ಭಾರತಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ರೆಹಮಾನ್ (೧೫)ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಇಲ್ಲಿನ ಶಬೀನಾ ಬೇಗಮ್ ಎನ್ನುವವರಿಗೆ ಮಕ್ಕಳು ಇಲ್ಲದ ಕಾರಣ ಮೊಹಮ್ಮದ್ ರೆಹಮಾನ್‌ನನ್ನ ದತ್ತು ಪಡೆದು ಸಾಕುತ್ತಿದ್ದರು. ತಾಯಿಯೊಡನೆ ಮನೆಯ ಮೇಲ್ಚಾವಣಿಯಲ್ಲಿ ಒಣಗಾಕಿದ ಬಟ್ಟೆಯನ್ನು ತೆಗೆದುಕೊಂಡು ಬರಲು ಹೋದ ಸಂದರ್ಭದಲ್ಲಿ ತಾಯಿ ಶಬೀನಾ ಬೇಗಂ ಮನೆಯೊಳಗೆ ಬಂದಿದ್ದು, ಮಗ ಬರದ ಹಿನ್ನೆಲೆಯಲ್ಲಿ ಒಂದೇರಡು ನಿಮಿಷ ಬಿಟ್ಟು ಹೋಗಿ ನೋಡಿದ್ದಾರೆ. ಅಷ್ಟರಲ್ಲಿಯೇ ಮಗ ಕುಸಿದು ಬಿದ್ದಿರುವುದನ್ನು ಕಂಡು ತಾಯಿ ಅಕ್ಕಪಕ್ಕದ ಮನೆಯವರ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗ ಕೊನೆ ಉಸಿರೆಳಿದಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್, ಪಿಎಸ್‌ಐ ಚೇತನ್ ಭೇಟಿ ನೀಡಿ ತನಿಖೆಯನ್ನು ಕೈಗೊಂಡಿದ್ದಾರೆ.