ಸಾರಾಂಶ
ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಚೇತನ ತಾರಾ ಸಿಂಗ್ ಪವಾರ (14) ಜೂ.30ರಂದು ರಾತ್ರಿ ಶಾಲೆಯಿಂದ ಕಾಣೆಯಾಗಿದ್ದಾನೆ.
ಕನ್ನಡಪ್ರಭ ವಾರ್ತೆ ಯಡ್ರಾಮಿ
ತಾಲೂಕಿನ ಸುಂಬಡ ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಚೇತನ ತಾರಾ ಸಿಂಗ್ ಪವಾರ (14) ಜೂ.30ರಂದು ರಾತ್ರಿ ಶಾಲೆಯಿಂದ ಕಾಣೆಯಾಗಿದ್ದಾನೆ ಎಂದು ಆತನ ತಂದೆ ತಾರಾಸಿಂಗ್ ಪವಾರ ಯಡ್ರಾಮಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂ.29ರಂದು ಹೋಮ್ ವರ್ಕ್ ಮಾಡಿಲ್ಲ ಎಂದು ಶಾಲೆಯ ಮುಖ್ಯಗುರುಗಳು ಆ ವಿದ್ಯಾರ್ಥಿಗೆ ಹೊಡೆದಿದ್ದರು. ಮರುದಿನದಿಂದ ಚೇತನ್ ಶಾಲೆಯಲ್ಲಿ ಕಾಣುತ್ತಿಲ್ಲ ಎಂದು ಚೇತನನ ಸ್ನೇಹಿತರು ದೂರವಾಣಿ ಮೂಲಕ ಪಾಲಕರಿಗೆ ತಿಳಿಸಿದ್ದಾರೆ. ಈ ವಿಷಯ ತಿಳಿದು ಪಾಲಕರು ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ವಿಚಾರಿಸಿ ಸುತ್ತಮುತ್ತ ಗ್ರಾಮಗಳಲ್ಲಿ ಹುಡುಕಾಟ ನಡೆಸಿದ್ದಾರೆ.ಮರಳಿ ಮನೆಗೆ ಬಾರದೆ ಹಾಗೂ ಶಾಲೆಗೆ ಹೋಗದೆ ಎಲ್ಲಿಯೋ ಕಾಣೆಯಾಗಿದ್ದಾನೆ ಎಂದು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವಿದ್ಯಾರ್ಥಿಯ ಗುರುತು ಪರಿಚಯ ಯಾರಿಗಾದರೂ ಸಿಕ್ಕಲ್ಲಿ ಯಡ್ರಾಮಿ ಪೊಲೀಸ್ ಠಾಣೆ ಮೊ. 9480803561 ಗೆ ಸಂಪರ್ಕಿಸಲು ಕೋರಲಾಗಿದೆ.