ಹಾವೇರಿ ನಗರದ ಕೇಂದ್ರಿಯ ವಿದ್ಯಾಲಯದ 4ನೇ ತರಗತಿ ವಿದ್ಯಾರ್ಥಿನಿ ಖುಷಿ ಗಾಯಕ್ವಾಡ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಕರ್ನಾಟಕ ಅಚೀರ್ಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದಾಳೆ.
ಹಾವೇರಿ:ನಗರದ ಕೇಂದ್ರಿಯ ವಿದ್ಯಾಲಯದ 4ನೇ ತರಗತಿ ವಿದ್ಯಾರ್ಥಿನಿ ಖುಷಿ ಗಾಯಕ್ವಾಡ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಕರ್ನಾಟಕ ಅಚೀರ್ಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದಾಳೆ. ವಿದ್ಯಾರ್ಥಿನಿ ಖುಷಿ ಗಾಯಕ್ವಾಡ್ (9ವರ್ಷ) ಪತ್ರಿಕೆಯ ಹಿಂಭಾಗದಿಂದ ಪದಗಳನ್ನು ವೀಕ್ಷಿಸುವ ಮೂಲಕ 4 ನಿಮಿಷ, 9 ಸೆಕೆಂಡುಗಳು ಮತ್ತು 87 ಮಿಲಿಸೆಕೆಂಡುಗಳಲ್ಲಿ ಏಕಕಾಲದಲ್ಲಿ ಹುಲಾ ಹೂಪ್ ಸ್ಪಿನ್‌ಗಳನ್ನು (ತನ್ನ ಸೊಂಟದ ಸುತ್ತ) ಮಾಡುವಾಗ ಕಣ್ಣುಮುಚ್ಚಿ 108 ಹಿಮ್ಮುಖ 3-ಅಕ್ಷರದ ಇಂಗ್ಲಿಷ್ ಪದಗಳನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದಾಳೆ. ಅಲ್ಲದೇ ಅಸಾಧಾರಣ ಗ್ರಹಣ ಶಕ್ತಿಯಿಂದ 52.92 ಸೆಕೆಂಡುಗಳಲ್ಲಿ 50 ಫ್ಲಾಶ್‌ಕಾರ್ಡಗಳನ್ನು ಗುರುತಿಸುವುದು, ರಾಮಾಯಣದ ಯಾದೃಚ್ಛಿಕ ಅಧ್ಯಾಯಗಳನ್ನು ಓದುವುದು ಮತ್ತು ಕಣ್ಣುಮುಚ್ಚಿ ವಿವಿಧ ಬಣ್ಣದ ಕಪ್‌ಗಳನ್ನು ಗುರುತಿಸಿ ಕರ್ನಾಟಕ ಅಚೀರ್ಸ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಪಾಲಕರಾದ ಕಿರಣಕುಮಾರ ಹಾಗೂ ಸುಷ್ಮಾ ಗಾಯಕ್ವಾಡ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.