ಆಲೋಚನೆಗಳು ಸರಿಯಿದ್ದಾಗ ಮಾತ್ರ ಸುಸ್ಥಿರ ದೇಶದ ನಿರ್ಮಾಣ ಸಾಧ್ಯ

| Published : Jul 26 2025, 12:30 AM IST

ಆಲೋಚನೆಗಳು ಸರಿಯಿದ್ದಾಗ ಮಾತ್ರ ಸುಸ್ಥಿರ ದೇಶದ ನಿರ್ಮಾಣ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಒಬ್ಬ ವ್ಯಕ್ತಿ ನಾಯಕನಾಗಿ ಸರಿಯಾದ ದೃಷ್ಠಿ ಜತೆಗೆ ಜವಾಬ್ದಾರಿಯನ್ನು ಹೊಂದಿದಾಗ ಮಾತ್ರ ಉತ್ತಮ ಆಡಳಿತದ ಜತೆಗೆ ಜನಮನದಲ್ಲಿ ನೆಲೆ ನಿಲ್ಲಲು ಸಾಧ್ಯ ಎಂದು ನಿಕಟಪೂರ್ವ ಸಹಾಯಕ ಗವರ್ನರ್ ಜಿ.ಎಸ್.ಪ್ರದೀಪ್ ಅಭಿಪ್ರಾಯಪಟ್ಟರು. ರೋಟರಿ ಸಂಸ್ಥೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಜತೆಗೆ ನೂತನ ಸದಸ್ಯರಿಗೆ ಹೆಚ್ಚಿನ ಮಾಹಿತಿ, ವಿಚಾರ ವಿನಿಮಯ ಮಾಡಿಕೊಂಡಾಗ ಸಂಸ್ಥೆಯ ಉದ್ದೇಶ ಹಾಗೂ ಧ್ಯೇಯವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಒಬ್ಬ ವ್ಯಕ್ತಿ ನಾಯಕನಾಗಿ ಸರಿಯಾದ ದೃಷ್ಠಿ ಜತೆಗೆ ಜವಾಬ್ದಾರಿಯನ್ನು ಹೊಂದಿದಾಗ ಮಾತ್ರ ಉತ್ತಮ ಆಡಳಿತದ ಜತೆಗೆ ಜನಮನದಲ್ಲಿ ನೆಲೆ ನಿಲ್ಲಲು ಸಾಧ್ಯ ಎಂದು ನಿಕಟಪೂರ್ವ ಸಹಾಯಕ ಗವರ್ನರ್ ಜಿ.ಎಸ್.ಪ್ರದೀಪ್ ಅಭಿಪ್ರಾಯಪಟ್ಟರು. ಪಟ್ಟಣದ ಕುರುಹಿನಶೆಟ್ಟಿ ಕಲ್ಯಾಣ ಮಂದಿರದಲ್ಲಿ ರೋಟರಿ ಕ್ಲಬ್ ತಾಲೂಕು ಘಟಕ ಆಯೋಜನೆ ಮಾಡಿದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಚೀನಾ ದೇಶದ ಚೈನಾವಾಲ್ ದಾಟಿ ಒಳಗೆ ನುಸುಳುವ ಶಕ್ತಿ ಯಾರಿಗೂ ಇರಲಿಲ್ಲವಾದರೂ ವಿದೇಶಿಗರು ೩ ಸಲ ಆಕ್ರಮಣ ನಡೆಸಿದರು. ಕಾರಣ ಆ ವಾಲ್ ಕಾಯುತ್ತಿದ್ದ ಸೈನಿಕರಿಗೆ ಹಣ ನೀಡಿ ವಿದೇಶಿಗರು ಆಕ್ರಮಣ ಮಾಡಿದರು. ಆದರೆ ಚೀನಾ ದೇಶವು ಚೈನವಾಲ್ ಕಟ್ಟುವ ಮುನ್ನ ಅವರ ಸೈನಿಕರ ನಡತೆಯನ್ನು ಸರಿಯಾಗಿ ನಿರ್ಮಿಸಿದ್ದರೆ ಆಕ್ರಮಣಗಳು ನಡೆಯುತ್ತಲೇ ಇರಲಿಲ್ಲ. ಆದ್ದರಿಂದ ಆಲೋಚನೆಗಳು ಸರಿಯಾದಾಗ ಮಾತ್ರ ಉತ್ತಮ ದೇಶದ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಿಸಿದರು.

ಇಂದು ಭೂತಾನ್ ದೇಶವು ಶ್ರೀಮಂತ ದೇಶವಲ್ಲದಿದ್ದರೂ "ಪೀಸ್‌ಫುಲ್ ಕಂಟ್ರಿ ಇನ್ ದ ವರ್ಲ್ಡ್ " ಎಂದು ಖ್ಯಾತಿಗಳಿಸಿದೆ. ಕಾರಣ ಅಲ್ಲಿ ಜನರ ಮನಸ್ಥಿತಿ ಜತೆಗೆ ದೇಶಾಭಿಮಾನ ನಿಷ್ಠೆ ಎಂದರು. ಆದ್ದರಿಂದ ದೇಶದ ಶಕ್ತಿಯೂ ಮನುಷ್ಯನ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದರು. ಪಾಕಿಸ್ತಾನದ ಸುಪಾರ್ಕೊ ಕೇಂದ್ರವು ೧೯೬೮ರಲ್ಲಿ ಕ್ಷಿಪಣಿ ಉಡಾವಣೆ ಮಾಡಿತ್ತು. ನಂತರದ ೫೭ ವರ್ಷದಲ್ಲಿ ಕೇವಲ ೬ ಕ್ಷಿಪಣಿ ಉಡಾಯಿಸಿದೆ. ನಮ್ಮ ದೇಶದ ಇಸ್ರೋ ೧೯೭೫ ರಲ್ಲಿ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಲಾಗಿತ್ತು, ನಂತರ ವರ್ಷಗಳಲ್ಲಿ ೪೨೫ ಕ್ಷಿಪಣಿಗಳ ಉಡಾವಣೆ ಮಾಡಲಾಗಿದೆ ಮತ್ತು ಒಂದೇ ಬಾರಿಗೆ ೧೦೪ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿ, ನಮ್ಮ ಇಸ್ರೋ ವಿಜ್ಞಾನಿಗಳ ಜ್ಞಾನಕ್ಕೆ ಸಾಕ್ಷಿಯಾಗಿದೆ. ಆದರೆ ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ ಏಕೆಂದರೆ ಅವರ ನಾಯಕರಲ್ಲಿ ದೂರದೃಷ್ಠಿಯ ಕೊರತೆ ಮತ್ತು ಸಂಕುಚಿತ ಮನೋಭಾವದಿಂದ ಶಿಕ್ಷಣ ಮತ್ತು ವಿಜ್ಞಾನಕ್ಕೆ ಒತ್ತು ನೀಡದ ಕಾರಣದಿಂದ ಇಂತಹ ಸ್ಥಿತಿ ತಲುಪಿದೆ. ಜತೆಗೆ ನಮ್ಮ ದೇಶದೊಂದಿಗೆ ಹೋಲಿಕೆ ಮಾಡಲಾಗದಷ್ಟು ಅಂತರವಿದೆ ಎಂದರು.

ರೋಟರಿ ಸಂಸ್ಥೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಜತೆಗೆ ನೂತನ ಸದಸ್ಯರಿಗೆ ಹೆಚ್ಚಿನ ಮಾಹಿತಿ, ವಿಚಾರ ವಿನಿಮಯ ಮಾಡಿಕೊಂಡಾಗ ಸಂಸ್ಥೆಯ ಉದ್ದೇಶ ಹಾಗೂ ಧ್ಯೇಯವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಸಂಸ್ಥೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿ ನೂತನ ಅಧ್ಯಕ್ಷ ಹಾಗೂ ಸದಸ್ಯರಿಗೆ ಸಲಹೆಗಳನ್ನು ನೀಡಿದರು.

ಸಹಾಯಕ ಗವರ್ನರ್ ಜೆ.ಎನ್.ಮಂಜುನಾಥ್, ವಲಯ ಲೆಫ್ಟಿನೆಂಟ್ ಶಶಿಧರ್ ಬಿ.ಸಿ., ನೂತನ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಆರ್., ಝೋನಲ್ ಸೆಕ್ರೆಟರಿ ಸುಧಾಕರ್, ಇತರರು ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಸಂತೋಷ್ ಎಚ್.ವೈ., ಹಾಗೂ ಕಾರ್ಯದರ್ಶಿ ಡಾ. ಕೃಷ್ಮಮೂರ್ತಿ ಅವರು ನೂತನ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಆರ್, ಕಾರ್ಯದರ್ಶಿ ಜಯಚಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ರೋಟರಿ ಸಂಸ್ಥೆಯ ಸದಸ್ಯರಾದ ಹೊನ್ನಪ್ಪ ಕೆ.ಎಂ., ಅಶೋಕ್ ಎಚ್.ಸಿ., ಮಂಜುನಾಥ್, ಶಿವಕುಮಾರ್, ಯೋಗೇಶ್, ಡಾ. ದೇವೋಜಿರಾವ್, ಗೋಪಾಲಕೃಷ್ಣ ರವೀಶ್ ಜಿ.ಟಿ. ರೇಣುಕೇಶ್, ರೇಣುಕಾ ರಂಗಸ್ವಾಮಿ, ಶ್ರೀಕಂಠಯ್ಯ, ಆಶಾ ಜ್ಯೋತಿ, ಫಕೀರಮ್ಮ, ಶಿವಕುಮಾರ್ ಇತರರು ಇದ್ದರು.