ಡೆತ್‌ನೋಟ್‌ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ

| Published : Jul 30 2025, 12:45 AM IST

ಡೆತ್‌ನೋಟ್‌ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮನ ನೊಂದು ನನ್ನ ಸಾವಿಗೆ ನಾನೇ ಕಾರಣ ನನ್ನ ಪತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

ಮಧುಗಿರಿ: ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂಬ ಗಾಳಿ ಸುದ್ದಿಗೆ ಮನ ನೊಂದ ಮಹಿಳಾ ಶಿಕ್ಷಕಿಯೊಬ್ಬರು ಡೆತ್ ನೋಟ್‌ ಬರೆದಿಟ್ಟು ಆತ್ಮಹತ್ಯಗೆ ಶರಣಾಗಿರುವ ಘಟನೆ ಮಧುಗಿರಿ ಪುರಸಭಾ ವ್ಯಾಪ್ತಿಯ ಲಾಲಪೇಟೆಯಲ್ಲಿ ಸೋಮವಾರ ಸಂಜೆ ನಡೆದಿದೆ.

ನೇರಳೇಕೆರೆ ಶಾಲೆಯ ಅತಿಥಿ ಶಿಕ್ಷಕಿ ನಾಗರತ್ನ (34) ಆತ್ಮಹತ್ಯ ಮಾಡಿ ಕೊಂಡ ದುರ್ದೈವಿ. ಈಕೆಯ ಪತಿ ಲಾರಿ ಚಾಲನಾಗಿದ್ದು, ಇವರು ತಾಲೂಕಿನ ಕೋಡ್ಲಾಪುರ ನಿವಾಸಿಗಳು. ಲಾಲಪೇಟೆಯಲ್ಲಿ ಮನೆ ಬಾಡಿಗೆ ಪಡೆದು ಪಟ್ಟಣದಲ್ಲಿ ವಾಸವಾಗಿದ್ದರು. ಪತಿ ಬೆಂಗಳೂರಿಗೆ ತೆರಳಿದ್ದು, ಮಕ್ಕಳಿಬ್ಬರು ಶಾಲೆಗೆ ಹೋಗಿದ್ದಾಗ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಡೆತ್‌ ನೋಟ್‌ ಬರೆದು ನನ್ನ ಬಗ್ಗೆ ಕೆಲವರು ಕೆಟ್ಟದಾಗಿ ಮಾತನಾಡಿದ್ದರು. ಇದರಿಂದ ಮನ ನೊಂದು ನನ್ನ ಸಾವಿಗೆ ನಾನೇ ಕಾರಣ ನನ್ನ ಪತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಮಧುಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.