ಸಾರಾಂಶ
- ಬ್ರೈಟ್ ಫ್ಯೂಚರ್ ಆಂಗ್ಲ ಶಾಲೆ, ಕ್ರಮುಕ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಕನ್ನಡಪ್ರಭ ವಾರ್ತೆ, ಬೀರೂರುಶಿಕ್ಷಕ ವಿದ್ಯಾರ್ಥಿಗಳ ಎದೆಯಲ್ಲಿ ಅಕ್ಷರ ಬಿತ್ತುವ ಬ್ರಹ್ಮ. ಪ್ರಪಂಚದ ಎಲ್ಲ ಹುದ್ದೆಗಳೂ ವಂದಿಸುವ ಅತ್ಯಂತ ಶ್ರೇಷ್ಠ ಹುದ್ದೆ ಶಿಕ್ಷಕನದ್ದು ಎಂದು ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥ ಗೌಡ ತಿಳಿಸಿದರು.ಪಟ್ಟಣದ ಕನ್ನಡ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಬ್ರೈಟ್ ಫ್ಯೂಚರ್ ಆಂಗ್ಲ ಶಾಲೆ ಮತ್ತು ಕ್ರಮುಕ ಪ್ರೌಢಶಾಲೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 137ನೇ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೇಶದ ಭವಿಷ್ಯ ಶಿಕ್ಷಕರ ಕೈಲಿದೆ. ಶಿಕ್ಷಕ ಜ್ಞಾನದ ಬೆಳಕು. ಬೆಳಕಿನ ಉರಿಯಿಲ್ಲದೆ ಇತರರಿಗೆ ಬೆಳಕಾಗುವುದು ಅಸಾಧ್ಯ. ಆದುದರಿಂದ ಶಿಕ್ಷಕರಾದವರು ತಮ್ಮ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕಿದೆ. ತನ್ನ ಕೆಲಸದ ಮೇಲೆ ಗೌರವ, ತನ್ನ ಪಾಠದ ಬಗ್ಗೆ ಆತ್ಮವಿಶ್ವಾಸ ಇದ್ದಾಗ ಇಡೀ ಸಮಾಜವನ್ನು ಬದಲಾವಣೆಯತ್ತ ಕೊಂಡೊ ಯ್ಯುವ ಶಕ್ತಿ ಶಿಕ್ಷಕರಿಗಿದೆ ಎಂದರು.
‘ಶಿಕ್ಷಕರ ಪ್ರಾಮಾಣಿಕ ಸೇವೆಯಿಂದಲೇ ಜ್ಞಾನ, ಮೌಲ್ಯಗಳು ಒಂದಾಗಿ ಸುಸ್ಥಿರ ಸಮಾಜ ನಿರ್ಮಾಣವಾಗಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ಶಿಕ್ಷಕ, ದಾರ್ಶನಿಕ. 1962ರಿಂದ 67ರವರೆಗೆ ಭಾರತದ ರಾಷ್ಟ್ರಪತಿ ಆಗಿದ್ದ ಅವರ ಶಿಕ್ಷಕ ವೃತ್ತಿ ಮೇಲಿನ ಅಮೂಲ್ಯ ಪ್ರೀತಿಯಿಂದ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತೇವೆ. ಶಿಕ್ಷಕರು ಸಮಾಜದ ಭವಿಷ್ಯ ನಿರ್ಮಿಸುವ ನಿರ್ದೇಶಕರು. ಶರವೇಗದ ಅಭಿವೃದ್ಧಿ ಕಾಲಘಟ್ಟದಲ್ಲಿ ಅನೇಕ ಸವಾಲುಗಳು ಎದುರಾಗಿವೆ. ಇವೆಲ್ಲ ನಿಭಾಯಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನ ನಡೆಯಲಿ ಎಂದರು.ಮಕ್ಕಳ ರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶಿಕ್ಷಕರು ಕ್ಷಮಾ ಗುಣ ಹೆಚ್ಚಾಗಿ ಬೆಳಸಿ ಕೊಳ್ಳಬೇಕು. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಂಡರೆ ಅವರು ನಿರ್ಭೀತಿಯಿಂದ ಕಲಿಯಲು ಆಸಕ್ತಿ ತೊರುತ್ತಾರೆ ಎಂದರು.ಕನ್ನಡಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಶ್ರೇಷ್ಠಿ ಮಾತನಾಡಿ, ದೇಶದ ಭವಿಷ್ಯ 4 ಕೊಠಡಿಗಳ ಒಳಗೆ ನಿರ್ಮಾಣ ಆಗುತ್ತದೆ. ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವಿನ ಜೀವನ ಉನ್ನತ ಮಟ್ಟದಲ್ಲಿ ಸಾಗಲು ಶಿಕ್ಷಕರ ಶ್ರಮ ಅಡಗಿದೆ’ ‘ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು. ಆಗ ಮಾತ್ರ ಗುರಿ ಸಾಧನೆ ಸಾಧ್ಯ’ ಕನ್ನಡ ಸಂಘದಡಿ ಸಾಗುತ್ತಿರುವ ಈ 2 ಶಾಲೆಗಳಲ್ಲಿ ಪ್ರತಿ ರ್ಷ ಇಲ್ಲಿ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ. ಮಕ್ಕಳು ಈ ದೇ ಶದ ಭವಿಷ್ಯದ ಆಸ್ತಿಯಾಗಿದ್ದು ಇವರನ್ನು ಶಿಕ್ಷಕ ತಾವು ಸತ್ಪ್ರಜೆಗಳನ್ನಾಗಿಸುವಲ್ಲಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.ಸಂಘದ ಖಜಾಂಚಿ ಡಿ.ಆರ್.ರಮೇಶ್ ಮಾತನಾಡಿ, ಒಬ್ಬ ವಿದ್ಯಾರ್ಥಿ ಭವಿಷ್ಯ ರೂಪಿಸುವ ಅಗಾಧ ಶಕ್ತಿ ಇರುವುದು ಉತ್ತಮ ಶಿಕ್ಷಕರಿಗೆ ಮಾತ್ರ. ಇಂತಹ ಗುರು ಸ್ಥಾನದ ಪಾವಿತ್ರತೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಎಲ್ಲ ಶಿಕ್ಷಕರೂ ತಮ್ಮ ಸೇವೆ ಸಲ್ಲಿಸಬೇಕು ಎಂದರು.ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಎಚ್.ಬಿ.ತಮ್ಮಣ್ಣಪ್ಪ, ಆರ್.ಸಬೀನ ಮೇರಿ, ವಿದ್ಯರ್ಥಿ ಸಂಘದ ನಾಯಕ ಸುಭ್ರಮಣ್ಯ ಸೇರಿದಂತೆ ನೂರಾರು ವಿದ್ಯರ್ಥಿಗಳು ಉಪಸ್ಥಿತರಿದ್ದರು.12 ಬೀರೂರು 1
ಬೀರೂರಿನ ಬ್ರೈಟ್ ಫ್ಯೂಚರ್ ಆಂಗ್ಲ ಶಾಲೆ ಮತ್ತು ಕ್ರಮುಕ ಪ್ರೌಢಶಾಲೆಯಲ್ಲಿ ಗುರುವಾರ ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥ ಗೌಡ ಉದ್ಘಾಟಿಸಿದರು. ನಾಗೇಂದ್ರ ಶ್ರೇಷ್ಠಿ , ಡಿ.ಆರ್.ರಮೇಶ್ ಸೇರಿದಂತೆ ಮತ್ತಿತರರು ಇದ್ದರು.