ಕೆಡಿಪಿ ಸಭೆಯಲ್ಲಿ ಶಾಸಕರು ನೀಡಿದ ಮಾರ್ಗದರ್ಶನದಂತೆ ಹಲಗೂರಿನಲ್ಲಿ ತಜ್ಞ ವೈದ್ಯರಿಂದ ಶಿಬಿರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಕೇಂದ್ರಗಳಾದ ಬಿ.ಜಿ.ಪುರ, ಕಿರುಗಾವಲು, ಹಾಡ್ಲಿ ಕೇಂದ್ರ ಗಳಲ್ಲಿಯೂ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಚನ್ನಪಟ್ಟಣ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾರ್ಗದರ್ಶನದಲ್ಲಿ ತಜ್ಞ ವೈದ್ಯರ ಪಡೆ ಹೋಬಳಿ ಮಟ್ಟದ ಕಡೆ ಎಂಬ ಘೋಷವಾಕ್ಯದಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಅಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಾದ ಚಾಮುಂಡಿ ಆಸ್ಪತ್ರೆ, ಜಿ.ಮಾದೇಗೌಡ ಆಸ್ಪತ್ರೆ ಸಹಯೋಗದಲ್ಲಿ ಹಲಗೂರು ಹೋಬಳಿಯ ಎಲ್ಲಾ ಜನತೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

ತಾಲೂಕು ವೈದ್ಯಾಧಿಕಾರಿ ವೀರಭದ್ರಪ್ಪ ಮಾತನಾಡಿ, ಕೆಡಿಪಿ ಸಭೆಯಲ್ಲಿ ಶಾಸಕರು ನೀಡಿದ ಮಾರ್ಗದರ್ಶನದಂತೆ ಹಲಗೂರಿನಲ್ಲಿ ತಜ್ಞ ವೈದ್ಯರಿಂದ ಶಿಬಿರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಕೇಂದ್ರಗಳಾದ ಬಿ.ಜಿ.ಪುರ, ಕಿರುಗಾವಲು, ಹಾಡ್ಲಿ ಕೇಂದ್ರ ಗಳಲ್ಲಿಯೂ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ತಾಪಂ ಇಒ ಶ್ರೀನಿವಾಸ್ ಮಾತನಾಡಿ, ಶಿಬಿರದಲ್ಲಿ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿ ನೀಡುತ್ತಾರೆ. ಪ್ರಯೋಜನ ಪಡೆಯಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಗುಲ್ನಾಜ್ ಬಾನು ಮಾತನಾಡಿ, ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾರ್ಗದರ್ಶನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ ಎಂದರು.

ಶಿಬಿರದಲ್ಲಿ ಹೃದ್ರೋಗ ತಜ್ಞ ಡಾ.ಹೇಮಂತ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ರಚನಾ, ಡಾ.ಪ್ರಗತಿ, ಚರ್ಮರೋಗ ತಜ್ಞ ಡಾ.ಮುಕುಂದ, ಮಕ್ಕಳ ತಜ್ಞರಾದ ಡಾ.ಹಂಸ, ಡಾ.ಶಿಲ್ಪಶ್ರೀ, ಡಾ.ಸ್ನೇಹ, ಡಾ.ಸಹನ, ಡಾ.ರಶ್ಮಿ ಸೇರಿದಂತೆ ಹಲವರು ರೋಗಿಗಳ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಿದರು.

418 ಜನರಿಗೆ ಆರೋಗ್ಯ ತಪಾಸಣೆ, 180 ಜನರಿಗೆ ಇಸಿಜಿ, 50 ಜನರಿಗೆ ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳುವಂತೆ ತಿಳಿಸಲಾಯಿತು. ಈ ವೇಳೆ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್, ಗ್ರಾಪಂ ಉಪಾಧ್ಯಕ್ಷೆ ಸಿ.ಲತಾ, ಸದಸ್ಯರಾದ ಜಮೀಲ್ ಪಾಷಾ, ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ಸೌಮ್ಯಶ್ರೀ, ಶಿಶು ಅಭಿವೃದ್ಧಿ ಅಧಿಕಾರಿ ನಂಜಮಣಿ, ಮುಖಂಡರಾದ ಕುಂತೂರು ಗೋಪಾಲ್, ತೇಜುಕುಮಾರ್( ಶ್ಯಾಮು,) ರಾಜಣ್ಣ, ಎಂ.ಶಿವಕುಮಾರ್, ನಾಗಸಿದ್ದಯ್ಯ, ಬಾಬು, ಅಮರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಶಾಸಕರ ಜನಪರ ಕಾಳಜಿಯಿಂದ ಶಿಬಿರದಲ್ಲಿ ತಜ್ಞ ವೈದ್ಯರ ತಂಡ 418 ಜನರಿಗೆ ತಪಾಸಣೆ ನಡೆಸಿದೆ. ಆರ್ಥಿಕ ಮುಗ್ಗಟ್ಟಿನಿಂದ ಪಟ್ಟಣ ಮತ್ತು ನಗರ ಪ್ರದೇಶದ ಆಸ್ಪತ್ರೆಗಳಿಗೆ ತೆರಳಲು ಸಾಧ್ಯವಾಗದ ಬಡ ಜನರಿಗೆ ಶಿಬಿರ ಸಹಕಾರಿಯಾಗಿದೆ.

-ಕುಂತೂರು ಗೋಪಾಲ್, ಯುವ ಕಾಂಗ್ರೆಸ್ ಮುಖಂಡಹೋಬಳಿ ಮಟ್ಟದ ಜನತೆಗೆ ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ಆರೋಗ್ಯ ಶಿಬಿರ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಪಾಲ್ಗೊಂಡು ಪ್ರಯೋಜನ ಪಡೆಯಬೇಕು.

-ಸೌಮ್ಯಶ್ರೀ, ಹಲಗೂರು ವೈದ್ಯಾಧಿಕಾರಿ