ವೀರಶೈವ ಲಿಂಗಾಯತ ಗ್ಲೋಬಲ್ ಬ್ಯುಸಿನೆಸ್ ಕಾನ್ ಕ್ಲೇವ್

| Published : Sep 18 2024, 02:00 AM IST

ವೀರಶೈವ ಲಿಂಗಾಯತ ಗ್ಲೋಬಲ್ ಬ್ಯುಸಿನೆಸ್ ಕಾನ್ ಕ್ಲೇವ್
Share this Article
  • FB
  • TW
  • Linkdin
  • Email

ಸಾರಾಂಶ

ಸಮಾವೇಶವು ಎಲ್ಲಾ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಯನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿದೆ.

ಕನ್ನಡಪ್ರಭ ವಾರ್ತೆ ಮೈಸೂರುಲಾಭರಹಿತ ಸಾರ್ವಜನಿಕ ಸಾಮಾಜಿಕ ಟ್ರಸ್ಟ್ ಆದ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ವತಿಯಿಂದ ಮೈಸೂರಿನಲ್ಲಿ ಮೂರು ದಿನಗಳ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್ಕ್ಲೇವ್ - 2025 ಅನ್ನು ಜ. 17 ರಿಂದ 19 ರವರೆಗೆ ಆಯೋಜಿಸಲಾಗುತ್ತಿದೆ ಎಂದು ಐಲೈಫ್ ಸಂಸ್ಥಾಪಕರು ಹಾಗೂ ಸಮಾವೇಶದ ಮುಖ್ಯ ಸಂಚಾಲಕ ಸಂತೋಷ್ ಕೆಂಚಾಂಬ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶವು ಎಲ್ಲಾ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಯನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿದೆ. ಮೂರು ದಿನಗಳ ಕಾಲ ಮಹಾರಾಜ ಕಾಲೇಜು ಮೈದಾನದಲ್ಲಿ ಕಾನ್ಕ್ಲೇವ್ ನಡೆಯುತ್ತದೆ. ದೇಶದ ವಿವಿಧ ಭಾಗಗಳಿಂದ ಬರುವ ಹಲವು ಜನರನ್ನು, ವೃತ್ತಿಪರರನ್ನು ಹಾಗೂ ಉದ್ಯಮಿಗಳನ್ನು ಭೇಟಿ ಮಾಡಲು ಸಹಾಯವಾಗುವ ಕಾರ್ಯಕ್ರಮ ಇದು ಎಂದರು.ಅನೇಕ ಉದ್ಯಮಿಗಳು ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇದು ಅತ್ಯುತ್ತಮ ವೇದಿಕೆಯೂ ಹೌದು. ಸಮಾವೇಶದ ಮೂರು ದಿನವೂ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಮಾವೇಶದಲ್ಲಿ ಭಾಗಿಯಾಗಲು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಒಪ್ಪಿದ್ದಾರೆ. ಇಲ್ಲಿ ಉದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಮಳಿಗೆ, ಚರ್ಚಾ ಕಾರ್ಯಕ್ರಮ ಮತ್ತು ಇತರ ಚಟುವಟಿಕೆ ಆಯೋಜಿಸಲಾಗುತ್ತದೆ ಎಂದು ಅವರು ಹೇಳಿದರು.ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲದೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕದ ನಗರಗಳಲ್ಲಿ ಒಂದು. ಹಿಂದೆಂದೂ ಕಾಣದ ರೀತಿಯಲ್ಲಿ ಮೈಸೂರು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಿದೆ. ಈ ಸಮಾವೇಶವು ಜಾಗತಿಕ ಹಂತದಲ್ಲಿ ನಗರದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿ ಹೊಂದಿದೆ. ಮೈಸೂರಿನತ್ತ ಹೂಡಿಕೆದಾರರನ್ನು ಆಕರ್ಷಿಸುವುದು, ವ್ಯಾಪಾರ- ವಹಿವಾಟು ಹೆಚ್ಚಾಗುವಂತೆ ಮಾಡುವುದು ಹಾಗೂ ನಗರದ ಒಟ್ಟಾರೆ ಉನ್ನತೀಕರಣ ಈ ಸಮಾವೇಶದ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.ಈ ಸಮಾವೇಶವು ಮುಖ್ಯವಾಗಿ ಮಹಿಳಾ ಉದ್ಯಮಶೀಲತೆ, ಮೈಕ್ರೋ ಎಂಟರ್ಪ್ರೈಸಸ್ ಮತ್ತು ಮೈಸೂರಿನ ಸಾಂಸ್ಕೃತಿಕತೆಯ ಮೇಲೆ ಕೇಂದ್ರೀಕೃತವಾಗಿದೆ. ಇಲ್ಲಿನ ಪ್ರತಿ ಪ್ರಾಂತ್ಯದ, ಪ್ರತಿ ಹಳ್ಳಿಯ ಜನರನ್ನು ತಲುಪುವ ಉದ್ದೇಶ ನಮ್ಮದು ಎಂದು ಅವರು ವಿವರಿಸಿದರು.ಐಲೈಫ್ ನ ಮಾಜಿ ಅಧ್ಯಕ್ಷ ಬಿ.ಎಸ್. ಪ್ರಶಾಂತ್ಮಾತನಾಡಿ, ಹಳ್ಳಿಯಿಂದ ಪಟ್ಟಣಕ್ಕೆ ಬರುವ ಉದ್ಯಮಿಗಳೆಲ್ಲರೂ ಬೃಹತ್ ಹಾಗೂ ಮಧ್ಯಮ ಉದ್ಯಮಗಳ ಮೇಲೆ ಮಾತ್ರ ಗಮನ ಕೊಡುತ್ತಾರೆ. ಅದಕ್ಕೂ ಮೀರಿ ನಮ್ಮ ನಾಡಿನಲ್ಲಿ ಕಡಕೋಳ ಚಾಪೆ, ರೋಸ್ ವುಡ್ಇನ್ಲೇ, ಅಗರಬತ್ತಿ ತಯಾರಿಕೆ ಸೇರಿದಂತೆ ಇನ್ನಿತರ ಸಣ್ಣ ಕೈಗಾರಿಕೆಗಳಿವೆ. ಇಂತಹ ಸಣ್ಣಪುಟ್ಟ ಉದ್ಯಮಿಗಳು ಕೂಡ ದೊಡ್ಡ ಕಾರ್ಯಕ್ರಮಗಳ ಪ್ರಯೋಜನ ಪಡೆದು ತಮ್ಮ ಉದ್ಯಮವನ್ನು ದೊಡ್ಡ ಮಟ್ಟಕ್ಕೆ ಬೆಳೆಯುವಂತೆ ಮಾಡಬೇಕು. ನಮ್ಮ ಸುತ್ತಮುತ್ತಲಿನ ಸಣ್ಣಪುಟ್ಟ ಹಳ್ಳಿಗಳ ಜನರೂ ಇದರ ಉಪಯೋಗ ಪಡೆಯಲಿ ಎಂಬುದು ನಮ್ಮ ಉದ್ದೇಶ ಎಂದರು.ಈ ವೇಳೆ ಸಮಾವೇಶದ ಟೀಸರ್‌ ಬಿಡುಗಡೆಗೊಳಿಸಲಾಯಿತು.ಸುದ್ದಿಗೋಷ್ಠಿಯಲ್ಲಿ ಐಲೈಫ್ ಸಂಸ್ಥಾಪಕ ಸಂತೋಷ ಕೆಂಚಾಂಬ, ಅವಿನಾಶ್ ಪಾಳೇಗಾರ್, ಮೈಸೂರು ಘಟಕದ ಅಧ್ಯಕ್ಷ ಮಹದೇವ ಪ್ರಸಾದ್, ಮಾಜಿ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ವೀರೇಶ್‌, ಕಾರ್ಯಕಾರಿ ಸಮಿತಿ ಸದಸ್ಯರಾದ ತೀರ್ಥ ಸ್ವಾಮಿ ಮತ್ತಿತರರು ಇದ್ದರು.