ಪ್ರಾರ್ಥನೆ, ಉಪವಾಸ, ದಾನ ಧರ್ಮದ ಮೂಲಕ ದೇವರ ಸಾಮೀಪ್ಯವನ್ನು ಕಾಣುವುದಕ್ಕೆ ಈ ತಪಸ್ಸಿನ ಕಾಲ ಕ್ರೈಸ್ತರಿಗೆ ಮಾರ್ಗದರ್ಶಿಯಾಗಿದೆ ಎಂದು ಉಡುಪಿ ಕ್ಯಾಥೋಲಿಕ್ ಧರ್ಮ ಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಉಡುಪಿ: ಪ್ರಾರ್ಥನೆ, ಉಪವಾಸ, ದಾನ ಧರ್ಮದ ಮೂಲಕ ದೇವರ ಸಾಮೀಪ್ಯವನ್ನು ಕಾಣುವುದಕ್ಕೆ ಈ ತಪಸ್ಸಿನ ಕಾಲ ಕ್ರೈಸ್ತರಿಗೆ ಮಾರ್ಗದರ್ಶಿಯಾಗಿದೆ ಎಂದು ಉಡುಪಿ ಕ್ಯಾಥೋಲಿಕ್ ಧರ್ಮ ಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಭಾನುವಾರ ಸಂಜೆ ಮಲ್ಪೆ ಯುಬಿಎಂ ಎಬನೇಜರ್ ಚರ್ಚಿನಲ್ಲಿ ಹೊಸಾನ್ನಾದಿಂದ ಶಿಲುಬೆಯವರೆಗೆ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಿ, ಶಿಲುಬೆ ಮೂಲಕ ಲೋಕಕ್ಕೆ ರಕ್ಷಣೆ ತೋರಿದ ಯೇಸು ಸ್ವಾಮಿ ಪ್ರತಿಯೊಬ್ಬರನ್ನು ಹರಸಲಿ ಎಂದು ಆಶೀರ್ವಚನ ನೀಡಿದರು.ಕ್ಯಾಂಪಸ್ ಕ್ರುಸೆಡ್ ಇಂಡಿಯಾ ಮಂಗಳೂರಿನ ಬ್ರದರ್ ರಮೇಶ್, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ. ಡಾ. ರೊಕ್ ಡಿಸೋಜಾ ದೇವರ ವಾಕ್ಯದ ಮೇಲೆ ಪ್ರಭೋಧನೆ ನೀಡಿದರು. ಯುಬಿಎಂ ಕ್ರಿಸ್ತ ಕಾರುಣ್ಯ ಚರ್ಚ್ ಕಟಪಾಡಿ, ಯುಬಿಎಂ ಜುಬಿಲಿ ಚರ್ಚ್ ಉಡುಪಿ, ಯುಬಿಎಂ ಕ್ರಿಸ್ತ ಕೃಪಾ ಮಣಿಪಾಲ, ಯುಬಿಎಂ ಕ್ರಿಸ್ತ ಶಾಂತಿ ಚರ್ಚ್ ಉದ್ಯಾವರ, ಸಿಎಸ್ ಐ ಎಬನೇಜರ್ ಮಲ್ಪೆ, ಸಂತ ಅನ್ನಮ್ಮ ಚರ್ಚ್ ತೊಟ್ಟಂ ಗಾಯನ ತಂಡಗಳಿಂದ ಸ್ತುತಿ ಗಾಯನ ಜರುಗಿತು. ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಧರ್ಮಗುರುಗಳಾದ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ವಂ. ವಿನ್ಸೆಂಟ್ ಕ್ರಾಸ್ತಾ, ವಂ. ವಿಲ್ಸನ್ ಡಿಸೋಜಾ, ವಂ.ಅಶ್ವಿನ್ ಆರಾನ್ಹಾ, ಯುಬಿಎಂ ಚರ್ಚಿನ ವಂ.|ಸಂತೋಷ್ ಎ., ವಂ. ಸ್ಟೀಫನ್ ಬಂಡಿ, ವಂ. ರಮೇಶ್ ಮುದಲಗಿ, ವಂ. ಮನೋಜ್ ವೈ.ಎಸ್., ವಂ. ವಿನಯ್ ಸಂದೇಶ್, ಸಭಾ ಹಿರಿಯರಾದ ಡೇನಿಯಲ್ ಜೆ. ಅಮ್ಮನ್ನ, ಸ್ಟಾರ್ವಿನ್ ಅಮ್ಮನ್ನ, ಮೋಹನ್ ಪಿ. ಅಮ್ಮನ್ನ, ಆಸ್ಟಿನ್ ಸಿಲ್ವಾ, ಸದಾನಂದ ಜತ್ತನ್ನ, ರೆನೋಲ್ಡ್ ಸಿ. ಜತ್ತನ್ನ, ಜನರಲ್ ಫಂಡ್ ಸಮಿತಿಯ ಎಡ್ವಿನ್ ಜತ್ತನ್ನ, ಸ್ಯಾಮುವೆಲ್ ಡಿ ಕರ್ಕಡಾ, ಬೆಂಜಮಿನ್ ಜಯಕರ ಮಾಬೆನ್, ನಿಕ್ಷನ್ ಡಿ ಪಾಂಗಾಳಾನ್ನ, ರೆನೋಲ್ಡ್ ಪ್ರವೀಣ್ ಕೋಟ್ಯಾನ್ ಹಾಗೂ ಉಪಸ್ಥಿತರಿದ್ದರು.
ಕುಮಾರ್ ಸಾಲಿನ್ಸ್ ಸ್ವಾಗತಿಸಿ, ಜುವೆಲ್ ವಂದಿಸಿದರು. ತೊಟ್ಟಂ ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.