ತುಳುನಾಡಿನ ದೈವಾರಾಧನೆ, ನಂಬಿಕೆ ಹಾಗೂ ಪಾರಂಪರಿಕ ಸಂಸ್ಕೃತಿಯ ಪ್ರತೀಕವಾಗಿರುವ ಇತಿಹಾಸ ಪ್ರಸಿದ್ಧ ಮುಜಿಲ್ನಾಯ ದೈವದ ಕಂಬಳ ಸಂಪ್ರದಾಯವು ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಾರ್ಕಳ: ತುಳುನಾಡಿನ ದೈವಾರಾಧನೆ, ನಂಬಿಕೆ ಹಾಗೂ ಪಾರಂಪರಿಕ ಸಂಸ್ಕೃತಿಯ ಪ್ರತೀಕವಾಗಿರುವ ಇತಿಹಾಸ ಪ್ರಸಿದ್ಧ ಮುಜಿಲ್ನಾಯ ದೈವದ ಕಂಬಳ ಸಂಪ್ರದಾಯವು ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.ಕಂಬಳದ ಅಂಗವಾಗಿ ‘ಕಂಬಳ ಕೋರಿ’ ಸಂಪ್ರದಾಯವನ್ನು ಭಕ್ತಿಭಾವದಿಂದ ನಡೆಸಲಾಯಿತು. ಬಳಿಕ ಕಂಬಳ ಗದ್ದೆಯಲ್ಲಿ ಹೋರಿಗಳನ್ನು ಓಡಿಸುವ ಪಾರಂಪರಿಕ ಕ್ರಮ ನಡೆಯಿತು. ಬಂಡಿ ಪೂಕರೆ (ಪೂಕರೆ)ಯನ್ನು ಕಂಬಳ ಗದ್ದೆಯ ಮಧ್ಯಭಾಗದಲ್ಲಿ ಇರಿಸಿ, ಬಂಡಿ ಎಳೆಯುವ ವಿಶಿಷ್ಟ ಸಂಪ್ರದಾಯವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪೂಕರೆಗೆ ನೀರು, ಹಾಲು ಹಾಗೂ ಗಂಧಪ್ರಸಾದ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಡ್ಯಾರ ಗುತ್ತಿನ ಅಶೋಕ್ ಜೈನ್, ಈದು ಗುತ್ತಿನ ಜಯರಾಜ್ ಜೈನ್, ಕೊಟ್ಟಾರಿ ಗುತ್ತಿನ ಯಶೋಧರ್, ಕಂಠಾವು ಗುತ್ತಿನ ನಮಿರಾಜ್, ಬರ್ಕೆ ಮನೆತನದವರು, ಹಿತ್ತಿಲು ಮನೆತನದ ಸೀನ ಪೂಜಾರಿ, ಒರಿಮಾರು ಬರ್ಕೆಯ ಸುರೇಶ್ ಪೂಜಾರಿ, ಭಟ್ಟಾಜೆ ಮನೆತನದ ರತ್ನ ಬೋಂಟ್ರಾ, ರಮೇಶ್ ಪಾಲಡ್ಕ ಸೇರಿದಂತೆ ವಿವಿಧ ಮನೆತನಗಳ ಪ್ರಮುಖರು, ದೈವದ ಚಾಕರಿದಾರರು, ಊರಿನ ಪ್ರಮುಖರು ಹಾಗೂ ಭಕ್ತರು ಉಪಸ್ಥಿತರಿದ್ದರು.