ಸಾರಾಂಶ
ನರಸಿಂಹರಾಜಪುರ: ತಾಲೂಕಿನ ಕಾನೂರು ಗ್ರಾಮದ ರಾಮನಹಡ್ಲು ಸರೋಜ ಎಂಬುವರ ಮನೆಯ ಮೇಲೆ ಅಕೇಶಿಯಾ ಮರ ಉರುಳಿ ಬಿದ್ದ ಘಟನೆ ಗುರುವಾರ ಸಂಜೆ 5 ಗಂಟೆಗೆ ನಡೆದಿದೆ.
ನರಸಿಂಹರಾಜಪುರ: ತಾಲೂಕಿನ ಕಾನೂರು ಗ್ರಾಮದ ರಾಮನಹಡ್ಲು ಸರೋಜ ಎಂಬುವರ ಮನೆಯ ಮೇಲೆ ಅಕೇಶಿಯಾ ಮರ ಉರುಳಿ ಬಿದ್ದ ಘಟನೆ ಗುರುವಾರ ಸಂಜೆ 5 ಗಂಟೆಗೆ ನಡೆದಿದೆ. ಮನೆಯ ಗೋಡೆ ಬಿರುಕು ಬಿದ್ದಿದೆ. 4 ಪಕಾಸಿ , ಸಿಮೆಂಟು ಕಂಬ ಹಾಳಾಗಿದೆ. ಮೇಲ್ಛಾವಣಿಯ ಕೆಲವು ಶೀಟುಗಳು ಸಹ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಕಾನೂರು ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್, ಗ್ರಾಮ ಆಡಳಿತಾಧಿಕಾರಿ ಕುಮಾರ ಸ್ವಾಮಿ ಭೇಟಿ ನೀಡಿ ನಷ್ಟದ ಅಂದಾಜು ಪರಿಶೀಲನೆ ಮಾಡಿದರು.