ನಿರಂತರ ಮಳೆಗೆ ಗಡಿಗೇಶ್ವರ ಶಾಲೆ ಮೇಲೆ ಉರುಳಿದ ಮರ

| Published : Jul 22 2024, 01:26 AM IST

ಸಾರಾಂಶ

ನರಸಿಂಹರಾಜಪುರ: ಶನಿವಾರ ಕಡಿಮೆಯಾಗಿದ್ದ ಮಳೆ ಮತ್ತೆ ಪ್ರಾರಂಭವಾಗಿದ್ದು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಟ್ಟು ಬಿಡದೆ ಸುರಿದಿದೆ.

ನರಸಿಂಹರಾಜಪುರ: ಶನಿವಾರ ಕಡಿಮೆಯಾಗಿದ್ದ ಮಳೆ ಮತ್ತೆ ಪ್ರಾರಂಭವಾಗಿದ್ದು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಟ್ಟು ಬಿಡದೆ ಸುರಿದಿದೆ.

ಮಳೆ ಜೊತೆಗೆ ಗಾಳಿಯೂ ಸೇರಿಕೊಂಡಿದ್ದು ಅಲ್ಲಲ್ಲಿ ವಿದ್ಯುತ್‌ ಕಂಬದ ಮೇಲೆ ಮರಗಳು ಉರುಳಿ ಬೀಳುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆ ಶುರುವಾಗಿದೆ. ಬಿಎಸ್ಎನ್ಎಲ್‌ ನೆಟ್ ವರ್ಕ್‌ ನಿಂತು ಹೋಗಿದೆ. ಅಡಕೆ ತೋಟದಲ್ಲಿ ಅಡಕೆ ಮರಗಳು ಸಾಲುಗಟ್ಟಿ ಬೀಳುತ್ತಿದೆ.

ತಾಲೂಕಿನ ಆಡುವಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆ ಅಡಕೆ ಮನೆ ಕೊಠಡಿ ಮೇಲೆ ಮರ ಉರುಳಿ ಬಿದ್ದು ಕಟ್ಟಡ ಹಾಳಾಗಿದೆ, ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆ ಸುತ್ತ ಕಾಡು ಮರಗಳಿದ್ದು ಯಾವುದೇ ಕ್ಷಣವಾದರೂ ಕಟ್ಟಡದ ಮೇಲೆ ಬೀಳುವ ಅಪಾಯವಿದ್ದು ಮರವನ್ನು ತೆಗೆಸಬೇಕು ಎಂದು ಶಿಕ್ಷಣ ಇಲಾಖೆಯಿಂದ ಅರಣ್ಯ ಇಲಾಖೆಯವರಿಗೆ ಮನವಿ ಮಾಡಲಾಗಿದೆ.

ಶೀಗುವಾನಿಯ ಸಮೀಪದ ಜುಮ್ಮನಕೊಡಿಗೆಯ ಗಿರೀಶ್‌ ಎಂಬುವರ ಮನೆ ಮೇಲೆ ಮರ ಉರುಳಿ ಬಿದ್ದಿದೆ. ಅದೇ ಗ್ರಾಮದ ಚಂದ್ರಪ್ಪ ಎಂಬುವರ ಶೌಚಾಲಯ ಮೇಲೆ ಮರ ಉರುಳಿ ಹಾನಿಯಾಗಿದೆ.