ಸಾಹಿತಿ ಕಮಲಾ ಹಂಪನಾಗೆ ನುಡಿನಮನ

| Published : Jun 25 2024, 12:30 AM IST

ಸಾರಾಂಶ

ಇಲ್ಲಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಡಾ. ಕಮಲಾ ಹಂಪನಾಗೆ ನುಡಿನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಗಂಗಾವತಿ

ಇಲ್ಲಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಡಾ. ಕಮಲಾ ಹಂಪನಾಗೆ ನುಡಿನಮನ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಮುಮ್ತಾಜ್ ಬೇಗಂ, ಕನ್ನಡದ ಹಿರಿಯ ಲೇಖಕಿ ಕಮಲಾ ಹಂಪನಾ ಅಗಲಿಕೆ ನೋವಿನ ಸಂಗತಿ. ಕನ್ನಡ ಸಂಸ್ಕೃತಿಗೆ ಕಮಲಾ ಹಂಪನಾ ಕೊಡುಗೆ ಮಹತ್ವದ್ದು. ಮಹಿಳೆಯಾಗಿ ಅವರ ಸಾಧನೆ ಅಗಾಧವಾದುದು. ಸಂಶೋಧಕಿ, ಕವಿಯಿತ್ರಿ, ವಿಮರ್ಶಕಿಯಾಗಿ ಕನ್ನಡಕ್ಕೆ ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥೆ ಜಗದೇವಿ ಕಲಶೆಟ್ಟಿ ಹಾಗೂ ಉಪನ್ಯಾಸಕರಾದ ಎ.ಕೆ. ಮಹೇಶಕುಮಾರ, ಗುಂಡೂರು ಪವನ್ ಕುಮಾರ್ ಮಾತನಾಡಿದರು. ಸಭೆಯಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ. ಶಿವರಾಜ ಗುರಿಕಾರ, ಪ್ರೊ. ಕರಿಗೂಳಿ, ಡಾ. ರವಿಕಿರಣ್, ಕನ್ನಡ ಉಪನ್ಯಾಸಕರಾದ ಡಾ. ಜೆ.ಎಂ. ಶಿಲ್ಪಾ, ಡಾ. ಉಷಾರಾಣಿ, ಡಾ. ಕೇಶವಮೂರ್ತಿ, ಡಾ. ಪಾಗುಂಡಪ್ಪ, ಡಾ. ಬಸವರಾಜ ಗೌಡನಬಾವಿ, ಬಾಲಪ್ಪ ಬಡಿಗೇರ್ ಇತರರಿದ್ದರು. ಸುಮಾ ಹೊಸಪೇಟೆ ನಿರೂಪಿಸಿದರು.

ಅಪಘಾತಃ ಬೈಕ್‌ ಸವಾರ ಸಾವು, ಇನ್ನೊಬ್ಬನಿಗೆ ಗಾಯ:

ನಿಯಂತ್ರಣ ತಪ್ಪಿ ಬೈಕ್ ಸೇತುವೆಯಿಂದ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೆ ಮೃತಪಟ್ಟು, ಇನ್ನೊರ್ವ ಗಾಯಗೊಂಡ ಘಟನೆ ಗಂಗಾವತಿ ನಗರದ ಆನೆಗೊಂದಿ ರಸ್ತೆಯ ತಹಸೀಲ್ದಾರ್‌ ಕಚೇರಿ ಬಳಿ ಭಾನುವಾರ ಮಧ್ಯರಾತ್ರಿ ನಡೆದಿದೆ.ಕಂಪ್ಲಿಯ ಬೈಕ್ ಸವಾರ ಎ.ರಮೇಶ(24) ಈರಪ್ಪ ಸ್ಥಳದಲ್ಲಿ ಮೃತಪಟ್ಟಿದ್ದರೆ, ತಿರುಮಲ ಸೋಮಪ್ಪ ಕಂಪ್ಲಿ(27)ತೀವ್ರ ಗಾಯಗೊಂಡಿದ್ದು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗಾವತಿಯಿಂದ ಬುಕ್ಕಸಾಗರ ಮಾರ್ಗ ಕಂಪ್ಲಿಗೆ ಹೋಗುವ ಸಂದರ್ಭ ಘಟನೆ ನಡೆದಿದೆ. ರಸ್ತೆ ಮಾರ್ಗದಲ್ಲಿ ತಿರುವು ಇದ್ದಿದ್ದರಿಂದ ಬೈಕ್ ಸವಾರ ಎ. ರಮೇಶ ಅವರಿಗೆ ನಿಯಂತ್ರಣ ತಪ್ಪಿದ್ದು, ಪಕ್ಕದಲ್ಲಿ ಸೇತುವೆ ಬಳಿಯ ಆಳವಾದ ತಗ್ಗಿಗೆ ಬೈಕ್ ಸಮೇತ ಬಿದ್ದಿದ್ದಾರೆ. ಇದರಿಂದ ಸವಾರ ರಮೇಶ ಸ್ಥಳದಲ್ಲಿ ಮೃತಪಟ್ಟಿದ್ದಾರೆ.ಈ ಕುರಿತು ಗಂಗಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.