ಸಾರಾಂಶ
ಕೊಡಗು ಮತ್ತು ಹಾಸನ ಗಡಿ ಭಾಗದ ಪಶ್ಚಿಮ ಘಟ್ಟ ಸಾಲುಗಳಿಗೆ ಸೇರಿದ ಹೊಸಕೋಟೆ ಬೆಟ್ಟದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಿರುವ ಹಾಸನ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪರಿಸರ ಇಲಾಖೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆಯನ್ನು ಶನಿವಾರ ಬೆಳಗ್ಗೆ ೧೦ಕ್ಕೆ ಹೊಸೂರು ಗ್ರಾಮದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕೊಡಗು ಮತ್ತು ಹಾಸನ ಗಡಿ ಭಾಗದ ಪಶ್ಚಿಮ ಘಟ್ಟ ಸಾಲುಗಳಿಗೆ ಸೇರಿದ ಹೊಸಕೋಟೆ ಬೆಟ್ಟದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಿರುವ ಹಾಸನ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪರಿಸರ ಇಲಾಖೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆಯನ್ನು ಶನಿವಾರ ಬೆಳಗ್ಗೆ ೧೦ಕ್ಕೆ ಹೊಸೂರು ಗ್ರಾಮದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಲಾಗಿದೆ.ಸಕಲೇಶಪುರ ಆಲೂರು ಕಟ್ಟಾಯ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು. ಈ ಸಭೆಗೆ ಯಸಳೂರು ತೆಂಕಲಗೂಡು ಬೃಹನ ಮಠದ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ಬಿ ಎಂ ನಾಗರಾಜ್, ಕುಮಾರ್, ಕಾವೇರಿ ಸೇನೆಯ ರವಿ ಚೆಂಗಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ವಿಭಾಗದ ಅಧ್ಯಕ್ಷ ಮನು ಸೋಮಯ್ಯ, ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್, ಹೊಸೂರು ಜಮ್ಮ ಮಸೀದಿ ಧರ್ಮಗುರು ಶಾಪಿ ಸ ಆದಿ, ಕಾವೇರಿ ಸೇನೆಯ ಹೊಸಬೀಡು ಶಶಿ, ಸಮಾಜಸೇವಕ ಕಾಮನಹಳ್ಳಿ ಕೀರ್ತಿ, ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಉಪಾಧ್ಯಕ್ಷ ಜಾನಕಿ, ವಿವಿಧ ಸಂಘ-ಸಂಸ್ಥೆಗಳು ಮುಖಂಡರು ಮತ್ತು ಪರಿಸರ ಪ್ರೇಮಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೋರಾಟ ಸಮಿತಿಯ ಮುಖಂಡ ಹೊಸೂರು ರಮೇಶ್, ಹೊಸಕೋಟೆ ಪುಟ್ಟಸ್ವಾಮಿ ತಿಳಿಸಿದ್ದಾರೆ.