ಸಾರಾಂಶ
ಕಡೂರು, ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ಸುಮಾರು 2 ಕ್ವಿಂಟಾಲ್‍ನಷ್ಟು ನಿಷೇಧಿತ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕನ್ನಡ ಪ್ರಭ ವಾರ್ತೆ, ಕಡೂರು
ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ಸುಮಾರು 2 ಕ್ವಿಂಟಾಲ್‍ನಷ್ಟು ನಿಷೇಧಿತ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡಿದ್ದಾರೆ.ಕಡೂರು ಪಟ್ಟಣದ ಬಸ್‍ನಿಲ್ದಾಣ, ಪುರಸಭೆ ರಸ್ತೆ, ಕದಂಬ ವೃತ್ತ, ಬಸವೇಶ್ವರ ವೃತ್ತ ಹಾಗೂ ಬಿ.ಎಚ್. ರಸ್ತೆ ಮಾರ್ಗದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಸಂಗ್ರಹವಾದ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿಪಡಿಸಿಕೊಂಡರು.
ಈ ಕುರಿತು ಪುರಸಭೆ ಆರೋಗ್ಯ ನಿರೀಕ್ಷಕ ಎಂ.ಎನ್, ಶ್ರೀನಿವಾಸಮೂರ್ತಿ ಮಾತನಾಡಿ ವಶ ಪಡಿಸಿಕೊಂಡ ಪ್ಲಾಸ್ಟಿಕ್ ನ್ನು ಸಿಬ್ಬಂದಿ ಪುರಸಭೆ ಕಚೇರಿ ಆವರಣದಲ್ಲಿ ನಾಶಪಡಿಸಿ ಸಿಮೆಂಟ್ ಪ್ಯಾಕ್ಟರಿಗೆ ನೀಡಲಾಗುತ್ತದೆ. ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಮಾರಾಟ ಮಾಡುವುದು ಕಂಡು ಬಂದರೆ ಕೂಡಲೇ ಕ್ರಮ ಕೈಗೊಂಡು ದಂಡ ವಿಧಿಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕ ಮಂಜಯ್ಯ, ನೈರ್ಮಲ್ಯ ಪರಿವೀಕ್ಷಕ ಕೆ.ಟಿ. ಮಂಜುನಾಥ್, ಆಂಜನೇಯ ಮತ್ತಿತರಿದ್ದರು. 7ಕೆಕೆಡಿಯು2.ಕಡೂರು ಪಟ್ಟಣದ ವಿವಿಧ ಅಂಗಡಿ ಮುಂಗ್ಗಟ್ಟುಗಳಲ್ಲಿ ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಪುರಸಭೆ ಕಚೇರಿಯ ಆವರಣದಲ್ಲಿ ಪುರಸಭಾ ಸಿಬ್ಬಂದಿಗಳು ನಾಶಪಡಿಸಿದರು. ಪುರಸಭಾ ಆರೋಗ್ಯ ನಿರೀಕ್ಷಕ ಶ್ರೀನಿವಾಸ್‍ಮೂರ್ತಿ, ಮಂಜುನಾಥ್ ಮತ್ತಿತರಿದ್ದರು.