ಅಭಿವೃದ್ಧಿ ಪರ, ದೇಶದ ಭದ್ರತೆಗೆ ಸಿಕ್ಕ ಗೆಲುವು: ಚರಂತಿಮಠ

| Published : Jun 05 2024, 12:31 AM IST

ಸಾರಾಂಶ

ಭಾರತೀಯ ಜನತಾ ಪಕ್ಷ 5ನೇ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದು, ಇದು ಅಭಿವೃದ್ಧಿ ಪರ ಹಾಗೂ ದೇಶದ ಭದ್ರತೆಗಾಗಿ ಸಿಕ್ಕ ಗೆಲುವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತೀಯ ಜನತಾ ಪಕ್ಷ 5ನೇ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದು, ಇದು ಅಭಿವೃದ್ಧಿ ಪರ ಹಾಗೂ ದೇಶದ ಭದ್ರತೆಗಾಗಿ ಸಿಕ್ಕ ಗೆಲುವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು,

ಮೊದಲಿನಿಂದಲೂ ಬಿಜೆಪಿ ಭದ್ರಕೋಟೆಯಾಗಿರುವ ಬಾಗಲಕೋಟೆ 5ನೇ ಬಾರಿಗೆ ಗದ್ದಿಗೌಡರನ್ನು ಗೆಲ್ಲಿಸುವ ಮೂಲಕ ಜನ ದೇಶದ ಅಭಿವೃದ್ಧಿ ಹಾಗೂ ದೇಶದ ಭದ್ರತೆಗೆ ಬಿಜೆಪಿ ಹಾಗೂ ಮೋದಿ ಅವಶ್ಯ ಎಂದು ನಿರ್ದರಿಸಿದ್ದರಿಂದ ಪಕ್ಷ ಅಭೂತಪೂರ್ವ ಗೆಲುವು ಸಿಕ್ಕಿದೆ. ಐತಿಹಾಸಿಕ ಗೆಲುವು ಸಾಧಿಸಿದ ಗದ್ದಿಗೌಡರಿಗೆ ಅಭಿನಂದನೆಗಳು ಎಂದರು.

ಚುನಾವಣೆಯಲ್ಲಿ ತನುಮನ ಹಾಗೂ ಶ್ರಮವಹಿಸಿ ಪಕ್ಷ ನೀಡಿದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಬಿಜೆಪಿ ಗೆಲುವಿಗೆ ಶ್ರಮಿಸಿದ ಎಲ್ಲ ಬಿಜೆಪಿ ಮುಖಂಡರಿಗೂ ಕಾರ್ಯಕರ್ತರಿಗೂ ತುಂಬ ಹೃದಯ ಧನ್ಯವಾದಗಳು. ಪಕ್ಷದ ಮೇಲೆ ಅಭಿವೃದ್ಧಿ ಕೆಲಸಗಳ ಮೆಲೆ ವಿಶ್ವಾಸವಿಟ್ಟು ಮತನೀಡಿ ಗೆಲ್ಲಿಸಿದ ಬಾಗಲಕೋಟೆ ಕ್ಷೇತ್ರದ ಎಲ್ಲ ಜನರಿಗೂ ತುಂಬು ಹೃದಯದ ಧನ್ಯವಾದಗಳನ್ನು ಡಾ.ವೀರಣ್ಣ ಚರಂತಿಮಠ ತಿಳಿಸಿದ್ದಾರೆ.