ಗ್ರಂಥಾಲಯಕ್ಕೆ ಸುತ್ತು ಗೋಡೆ, ಗೇಟ್‌ ಹಾಕಿಸುವೆ: ಪುರಸಭೆ ಅಧ್ಯಕ್ಷ ಕಿರಣ್‌ ಗೌಡ

| Published : Sep 10 2024, 01:43 AM IST

ಗ್ರಂಥಾಲಯಕ್ಕೆ ಸುತ್ತು ಗೋಡೆ, ಗೇಟ್‌ ಹಾಕಿಸುವೆ: ಪುರಸಭೆ ಅಧ್ಯಕ್ಷ ಕಿರಣ್‌ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ಪಟ್ಟಣದ ಹಳೆ ಆಸ್ಪತ್ರೆ ರಸ್ತೆಯ ಬಳಿಯ ಕಿಷ್ಕಿಂಧೆಯಂತಿದ್ದ ಕಟ್ಟಡದಿಂದ ಸ್ಥಳಾಂತರಗೊಂಡ ಸಾಹುಕಾರ್‌ ಚಿಕ್ಕಮಲ್ಲಪ್ಪ ಗ್ರಂಥಾಲಯಕ್ಕೆ ಸುತ್ತು ಗೋಡೆ ಹಾಗೂ ಗೇಟ್ ಹಾಕಿಸಿಕೊಡುವುದಾಗಿ ಪುರಸಭೆ ನೂತನ ಅಧ್ಯಕ್ಷ ಕಿರಣ್‌ ಗೌಡ ಭರವಸೆ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್‌ (ಶೈಲೇಶ್)‌ ಮನವಿ ಮೇರೆಗೆ ಸ್ಥಳಕ್ಕೆ ಆಗಮಿಸಿ ಮಾತನಾಡಿದರು.

ಗುಂಡ್ಲುಪೇಟೆ: ಪಟ್ಟಣದ ಹಳೆ ಆಸ್ಪತ್ರೆ ರಸ್ತೆಯ ಬಳಿಯ ಕಿಷ್ಕಿಂಧೆಯಂತಿದ್ದ ಕಟ್ಟಡದಿಂದ ಸ್ಥಳಾಂತರಗೊಂಡ ಸಾಹುಕಾರ್‌ ಚಿಕ್ಕಮಲ್ಲಪ್ಪ ಗ್ರಂಥಾಲಯಕ್ಕೆ ಸುತ್ತು ಗೋಡೆ ಹಾಗೂ ಗೇಟ್ ಹಾಕಿಸಿಕೊಡುವುದಾಗಿ ಪುರಸಭೆ ನೂತನ ಅಧ್ಯಕ್ಷ ಕಿರಣ್‌ ಗೌಡ ಭರವಸೆ ನೀಡಿದ್ದಾರೆ.

ಸೋಮವಾರ ಬೆಳಗ್ಗೆ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್‌ (ಶೈಲೇಶ್)‌ ಮನವಿ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದ ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಗ್ರಂಥಾಲಯದೊಳಗಿನ ಸ್ವಚ್ಛತೆ ಕಂಡು ಕೂಡಲೇ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಹೇಳಿದರು. ಸ್ಥಳೀಯ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರೊಂದಿಗೆ ಚರ್ಚಿಸಿ ಗ್ರಂಥಾಲಯ ಡಿಜಿಟಲೀಕರಣಗೊಳಿಸಲು ಕ್ರಮ ವಹಿಸುತ್ತೇನೆ. ಅಲ್ಲದೆ ಗ್ರಂಥಾಲಯಕ್ಕೆ ಸುತ್ತು ಗೋಡೆ, ಗೇಟಿನ ಅಗತ್ಯ ಕಂಡು ನಾನೇ ಮಾಡಿಸುವೆ ಎಂದು ಭರವಸೆ ನೀಡಿದರು.

ಕನ್ನಡಪ್ರಭಕ್ಕೆ ಮೆಚ್ಚುಗೆ:

ಪಟ್ಟಣದ ಗ್ರಂಥಾಲಯ ಕಿಷ್ಕಿಂಧೆಯಂತಿನ ಕಟ್ಟಡದಲ್ಲಿತ್ತು. ಕನ್ನಡಪ್ರಭ ನಿರಂತರ ವರದಿ ಮಾಡುವ ಮೂಲಕ ಗ್ರಂಥಾಲಯ ಸ್ಥಳಾಂತರಕ್ಕೆ ಕನ್ನಡಪ್ರಭ ಕಾರಣವಾಗಿದೆ. ಜೊತೆಗೆ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌ (ಶೈಲೇಶ್)‌, ಪುರಸಭೆ ಸದಸ್ಯ ಎನ್.ಕುಮಾರ್‌,ದಲಿತ ಮುಖಂಡ ಕಾಳಸ್ವಾಮಿ ನಿರಂತರ ಪ್ರಯತ್ನದ ಫಲವಾಗಿ ಗ್ರಂಥಾಲಯ ಮುಖ್ಯ ರಸ್ತೆಗೆ ಬರಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು. ಈ ಸಮಯದಲ್ಲಿ ಕಾವಲು ಪಡೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.