ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಸ್ತ್ರೀ ಎಂದರೆ ಬರೀ ಹೆಣ್ಣಲ್ಲ ಅವಳೊಂದು ಅದ್ಭುತ ಶಕ್ತಿ, ಚೈತನ್ಯ ಸ್ವರೂಪಿ, ಸಮಾಜದ ಬಹುಮುಖ್ಯ ಅಂಗ ಎಂದು ಶಿಕ್ಷಕಿ ನೀಲಮ್ಮ ಹತ್ತಳ್ಳಿ ಬಣ್ಣಿಸಿದರು. ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾ ಸಂಘದಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕಲಾವಿದರ ಮನದಂಗಳ ಚಿತ್ರಕಲಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸ್ತ್ರೀ ಎಂದರೆ ಬರೀ ಹೆಣ್ಣಲ್ಲ ಅವಳೊಂದು ಅದ್ಭುತ ಶಕ್ತಿ, ಚೈತನ್ಯ ಸ್ವರೂಪಿ, ಸಮಾಜದ ಬಹುಮುಖ್ಯ ಅಂಗ ಎಂದು ಶಿಕ್ಷಕಿ ನೀಲಮ್ಮ ಹತ್ತಳ್ಳಿ ಬಣ್ಣಿಸಿದರು.ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾ ಸಂಘದಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕಲಾವಿದರ ಮನದಂಗಳ ಚಿತ್ರಕಲಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಶಶಿಕಲಾ ಹೂಗಾರ ಮಾತನಾಡಿ, ಹೆಣ್ಣು ಸಂಸಾರದ ಕಣ್ಣಾದರೆ ಕಲಾವಿದ ಸಮಾಜದ ಕಣ್ಣು. ಸ್ತ್ರೀ ತಾನು ಏನೆಂದು ನಿರೂಪಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಾಳೆ. ೧೨ನೇ ಶತಮಾನದಲ್ಲಿ ಅಕ್ಕಮಹಾದೇವಿಗೆ ಅನುಭವ ಮಂಟಪದಲ್ಲಿ ಅವಕಾಶ ನೀಡದಿದ್ದರೆ ಇಂದು ನಾವು ಅವರನ್ನು ಓದುತ್ತಿರಲಿಲ್ಲ ಎಂದರು.ಕಲಾವಿದ ರಮೇಶ್ ಚೌವ್ಹಾಣ ಮಾತನಾಡಿ, ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಕಲಾ ಶಿಬಿರಗಳು ಆಯೋಜನೆ ಆಗಬೇಕು. ಬೇರೆ ರಾಜ್ಯದ ಮಹಿಳಾ ಕಲಾವಿದರು ಚಿತ್ರ ರಚಿಸುವುದನ್ನು ಜಿಲ್ಲೆಯ ಕಲಾವಿದರು ನಾಗರಿಕರು ನೋಡುವಂತಾಗಬೇಕು ಎಂದು ಹೇಳಿದರು.
ಶಂಕ್ರಮ್ಮ ಹೂಗಾರ, ಸುಭಾಸ ಕೆಂಭಾವಿ, ಪಿ.ಎಸ್.ಕಡೆಮನಿ, ವಿದ್ಯಾಧರ ಸಾಲಿ, ವೀರಯ್ಯ ಹಿರೇಮಠ, ಲಿಂಗರಾಜ ಕಜಾಪುರ, ಆನಂದ ಝಂಡೆ, ಮಲ್ಲಿಕಾರ್ಜುನ ಕನ್ನೂರ , ಸಿದ್ದು ಬಳಲಗಿಡದ, ಮುರಳಿಧರ ಭೋವಿ, ವಿಜಯ ರವಿ ನಾಯಕ, ಶಿವಾನಂದ ಅಥಣಿ, ಕಮಲೇಶ ಭಜಂತ್ರಿ, ರವಿ ಮುದುಗಲ್, ಬಿ.ಎಸ್.ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಸ್ವಪ್ನ ಕಲಾದಗಿ ಸ್ವಾಗತಿಸಿದರು. ಕಲಾ ಸಂಘದ ಅಧ್ಯಕ್ಷೆ ರಾಜೇಶ್ವರಿ ಮೋಪಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಲ್ಪನಾ ಬಾಬಕರ ನಿರೂಪಿಸಿದರು, ಧನಲಕ್ಷ್ಮಿ ದೊಡ್ಡಮನಿ ವಂದಿಸಿದರು. ಶರಣಮ್ಮ ಕುಂಸಿ ಸ್ಥಳದಲ್ಲಿ ಕವನ ರಚಿಸಿ ಹಾಡಿದರು.
ಇದೇ ಸಂದರ್ಭದಲ್ಲಿ ಅನನ್ಯ ಯಳಮೇಲಿ, ಸುಚಿತ್ರಾ ಲಿಂಗದಳ್ಳಿ, ಧನಲಕ್ಷ್ಮಿ ದೊಡ್ಡಮನಿ, ದಾಕ್ಷಾಯಿಣಿ ಇಮ್ನಾದ,ಗಿರಿಜಾ ಬಿರಾದರ, ಹಾಜಮಾ ಹುದ್ದಾರ್, ಕಲ್ಪನಾ ಬಾಬಕರ್ ,ಲಕ್ಷ್ಮಿ ಬಿರಾದಾರ, ಮಹದೇವಿ ಕೊಪ್ಪದ,ರಾಜೇಶ್ವರಿ ಕೌಲಗಿ, ಯಾಮಿನಿ ಶಹಾ ಇವರು ತಮ್ಮ ಮನದಂಗಳದಿಂದ ಮೂಡಿಬಂದ ಚಿತ್ರಗಳನ್ನು ಬಣ್ಣಗಳ ಮೂಲಕ ಚಿತ್ರ ಬರೆದು ಗಮನ ಸೆಳೆದರು.