ಸಾರಾಂಶ
ಮಹಿಳೆ ಯಾವುದಾದರೊಂದು ಸಾಧನೆ ಮಾಡಬೇಕಾದರೆ ಛಲ ಇರಬೇಕು. ಜೊತೆಗೆ ಹಿಂದೆನಿಂತು ಪ್ರೋತ್ಸಾಹಿಸುವವರು ಇರಬೇಕು ಎಂದು ಸಾಹಿತಿ, ಜಿಪಂ ಮಾಜಿ ಉಪಾಧ್ಯಕ್ಷೆ ಶೋಭಾ ಮೇಟಿ ಹೇಳಿದರು.
ಮುಂಡರಗಿ: ಮಹಿಳೆ ಯಾವುದಾದರೊಂದು ಸಾಧನೆ ಮಾಡಬೇಕಾದರೆ ಛಲ ಇರಬೇಕು. ಜೊತೆಗೆ ಹಿಂದೆನಿಂತು ಪ್ರೋತ್ಸಾಹಿಸುವವರು ಇರಬೇಕು ಎಂದು ಸಾಹಿತಿ, ಜಿಪಂ ಮಾಜಿ ಉಪಾಧ್ಯಕ್ಷೆ ಶೋಭಾ ಮೇಟಿ ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ತಾಲೂಕು ಘಟಕಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷಾ ಕಾರ್ಯಕ್ರಮದಲ್ಲಿ ಕದಳಿಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ತಾಲೂಕು ಶರಣ ಸಾಹಿತ್ಯ ಹಾಗೂ ಕದಳಿ ವೇದಿಕೆ ನನಗೆ ಕದಳಿಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ನಾನು ಇನ್ನಷ್ಟು ಸಾಹಿತ್ಯ, ಸಾಂಸ್ಕೃತಿಕ ಸೇವೆ ಮಾಡಲು ಪ್ರೇರೇಪಿಸಿದೆ ಎಂದರು.
ಇನ್ನೊಬ್ಬರ ಏಳಿಗೆ ಮತ್ತು ಸಾಧನೆಯನ್ನು ನಾವು ಖುಷಿಯಿಂದ ಒಪ್ಪಿಕೊಂಡಾಗ ಮಾತ್ರ ನಾವು ಮಾಡುವ ಕೆಲಸ ಕಾರ್ಯಗಳು ಸದಾ ಯಶಸ್ವಿಯಾಗುತ್ತವೆ. ತಾಯೆಂದಿರು ಇಂದಿನ ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಉಳಿಸಿ ಆಟೊಟಗಳಿಗೆ ಹಚ್ಚಬೇಕು. ಆಟೋಟಗಳು ಮಕ್ಕಳಿಗೆ ಸೋಲು ಗೆಲುವಿನ ಜೀವನದ ಪಾಠಗಳನ್ನು ಕಲಿಸುತ್ತವೆ. ಜತೆಗೆ ಮಕ್ಕಳಿಗೆ ಸಮಚಿತ್ತತೆಯನ್ಬು ಕಲಿಸುತ್ತವೆ. ಆದ್ದರಿಂದ ಮಕ್ಕಳನ್ನು ಪುಸ್ತಕದ ಹುಳುವನ್ನಾಗಿ ಮಾಡದೇ ಇತರೆ ಜೀವನಾನುಭವದ ಪಾಠಗಳನ್ನು ಕೇಳಿಸಬೇಕು ಎಂದರು. ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ಎಂದರೆ ಮಹಾ ಇಳೆ ಎಂದರ್ಥ. ಹಿರಿಯದಾದ ಭೂಮಿಯು ಮಹಿಳೆಯಾಗಿದ್ದಾಳೆ. ಭೂಮಿ ತೂಕದಷ್ಟೇ ಹೆಣ್ಣಿನ ವ್ಯಕ್ತಿತ್ವವಿದೆ. ಪ್ರೀತಿ, ಮಮತೆ, ತಾಳ್ಮೆ, ಬಾಂಧವ್ಯಗಳ ಸಾಕಾರ ಮೂರ್ತಿಯೇ ಮಹಿಳೆ. ಇಂದು ಮಹಿಳೆ ಎಲ್ಲ ರಂಗಗಳಲ್ಲಿ ಮುಂದಿದ್ದುದರಿಂದ ಅವಳು ಅಬಲೆಯಲ್ಲ, ಸಬಲೆ. 12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ಉನ್ನತ ಸ್ಥಾನ ಕೊಟ್ಟು ಮುಖ್ಯವಾಹಿನಿಗೆ ತಂದಿದ್ದರು. ಮುಂಡರಗಿ ಕದಳಿ ಮಹಿಳಾ ವೇದಿಕೆ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ ಎಂದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ನೂತನ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ಬೋಧಿಸಿ ಮಾತನಾಡಿ, ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮಹಿಳೆಯ ಸರ್ವಾಂಗೀಣ ಪ್ರಗತಿಗೆ ಎಲ್ಲರೂ ಪ್ರಯತ್ನಿಸಿ ಅವಳು ಮುಖ್ಯವಾಹಿನಿಯಲ್ಲಿ ಬರಲು ಅವಕಾಶ ಕಲ್ಪಿಸಿಕೊಡಬೇಕು. ಈ ವೇಳೆ ಅಂಧ ಮಹಿಳೆ ಶೋಭಾ ಮಲ್ಲಾಡದ, ಮೃತ ವೀರಯೋಧ ಪತ್ನಿ ಶಿವಲೀಲಾ ಸೊಕ್ಕಿ, ವಿಶೇಷಚೇತನ ರಾಜಮಾ ಹಾತಲಗೇರಿ, ಪುರಸಭೆಯ ಪೌರ ಕಾರ್ಮಿಕ ಮಹಿಳೆ ಗಂಗಮ್ಮ ಹರಿಜನ, ಸೇವಾ ರತ್ನ ಪ್ರಶಸ್ತಿ ಪಡೆದ ವೀಣಾ ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಶಸಾಪ ಅಧ್ಯಕ್ಷ ಡಾ. ಸಂತೋಷ ಹಿರೇಮಠ, ಎಸ್.ಎಸ್.ಕೆ.ಸಮಾಜದ ಅಧ್ಯಕ್ಷ ಅಶೋಕ ಶಿದ್ಲಿಂಗ್, ಬೂದಪ್ಪ ಅಂಗಡಿ, ಸೋಮರಡ್ಡಿ ಬಸಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತಾಲೂಕು ಶಸಾಪ ಗೌರವಾಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸೀತಾ ಬಸಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಲಾ ಕುಕನೂರ ಸನ್ಮಾನಿತರನ್ನು ಪರಿಚಯಿಸಿದರು. ಗಿರಿಜಾ ಸೂಡಿ ಸ್ವಾಗತಿಸಿ, ಪ್ರತಿಭಾ ಹೊಸಮನಿ ನಿರೂಪಿಸಿದರು. ಶ್ರೀದೇವಿ ಗೋಡಿ ವಂದಿಸಿದರು.