ಹಾವೇರಿ: ಹೆಣ್ಣು ಸಂಸಾರದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ. ಹೆಣ್ಣಿನ ಸಾಮರ್ಥ್ಯ ಕೇವಲ ಸಂಸಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಅಡುಗೆ ಮನೆಯಿಂದ ಹಿಡಿದು ಆಕಾಶದಗಲ ಕೆಲಸ ಮಾಡುವ ಸಾಮರ್ಥ್ಯವನ್ನು ಮಹಿಳೆ ಹೊಂದಿದ್ದಾಳೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ನಗರದ ಜಿಲ್ಲಾ ಗುರುಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕ ಹಾವೇರಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 115ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆಯಲ್ಲಿ ಮಹಿಳೆಯರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. 70 ಕೋಟಿ ಮಹಿಳೆಯರು ಇರುವ ಭಾರತ ದೇಶದಲ್ಲಿ ಮಹಿಳೆಯರನ್ನು ಹೊರಗಿಟ್ಟು ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯವಿಲ್ಲ. 2047ಕ್ಕೆ ವಿಕಸಿತ ಭಾರತದ ಕನಸು ನನಸಾಗಬೇಕಾದರೆ ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂದರು.ಪುರುಷ ಪ್ರಧಾನ ಸಮಾಜದಲ್ಲಿ ಲಿಂಗ ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಗಳಿಗೆ ಪ್ರತಿಕ್ಷಣ ಮಹಿಳೆಯರು ಶೋಷಣೆ ಅನುಭವಿಸುತ್ತಲೇ ಇದ್ದಾರೆ. ಮಹಿಳೆಯರನ್ನು ನೋಡುವ ದೃಷ್ಟಿಕೋನ ಮೊದಲು ಬದಲಾಗಬೇಕು. ಮಹಿಳೆ ಪುರುಷರಷ್ಟೇ ಸಮಾನಳು ಎಂದು ಭಾವಿಸಿ ಅವಕಾಶಗಳನ್ನು ಕೊಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಶೇ.40ರಿಂದ 50ರಷ್ಟು ಮಹಿಳೆಯರು ಆಡಳಿತ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಶೇ.33ರಷ್ಟು ಮೀಸಲು ಮಹಿಳಾ ವಲಯಕ್ಕೆ ಆದ್ಯತೆ ನೀಡುವ ಚಿಂತನೆ ನಡೆಸಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಡಾ. ಪಿ.ಜಿ.ಆರ್. ಸಿಂಧ್ಯ ಮಾತನಾಡಿ, 1907ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕರ್ನಾಟಕದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಪ್ರಾರಂಭಿಸಿದರು. 1950ರಿಂದ ಇಲ್ಲಿಯವರೆಗೆ ಸೇವೆಗೆ ಸ್ಕೌಟ್ಸ್ ಗೈಡ್ಸ್ ಎಂದು ತೋರಿಸಿ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಯುವ ಆಪತ್ ಮಿತ್ರ ಎಂಬ ಯೋಜನೆ ಘೋಷಣೆ ಮಾಡಿದೆ. ಆಪತ್ತಿನ ಸಂದರ್ಭದಲ್ಲಿ ಕೆಲಸ ಮಾಡುವ ಯುವ ಪಡೆ ನಿರ್ಮಿಸಲು ಯೋಜನೆ ಬದ್ಧವಾಗಿದೆ. ಈ ಪಡೆಗೆ ಆಯ್ಕೆಯಾಗುವ ಸ್ಕೌಟ್ಸ್ ಮತ್ತು ಗೈಡ್ಸಗಳಿಗೆ ಮೂರು ವರ್ಷಗಳ ಇನ್ಸೂರೆನ್ಸ್, ಒಳ್ಳೆಯ ಆಹಾರ ಸೇರಿದಂತೆ ಮೂಲಭೂತ ಸೌಕರ್ಯ ಕೊಡುತ್ತಿರುವುದು ಶ್ಲಾಘನೀಯವಾಗಿದೆ. ವಿಶೇಷವಾಗಿ ಈ ಯೋಜನೆಯಡಿ ಕರ್ನಾಟಕ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಕೂಡ ಹೆಚ್ಚು ತರಬೇತಿ ಕೇಂದ್ರಗಳನ್ನು ತೆರೆದು, ಅನೇಕ ಚಟುವಟಿಕೆಗಳನ್ನು ನಡೆಸಬೇಕು. ಜಿಲ್ಲಾಡಳಿತ ಕೂಡ ಸಹಕಾರ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಗೈಡ್ಸ್ ಸಹಾಯಕ ರಾಜ್ಯ ಆಯುಕ್ತೆ ರಾಧಾ ವೆಂಕಟೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಡಿಪಿಐ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಮೋಹನ್ ದಂಡಿನ, ಕ್ಷೇತ್ರ ಶಿಕ್ಷಣಾಕಾರಿ ಎಂ.ಹೆಚ್. ಪಾಟೀಲ, ರಾಜ್ಯ ಆಯುಕ್ತೆ ಗೀತಾ ನಟರಾಜ, ಡಾ. ನವೀನ್ ರಾಯ್ಕರ್, ಡಾ. ಮಾಧುರಿ ದೇವಧರ, ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಮಲ್ಲಿಕಾರ್ಜುನ ಶಾಂತಗಿರಿ, ಬಸವರಾಜ ಅರಳಿ, ಎಂ.ಆರ್. ಪಾಟೀಲ, ಬಿ.ಪಿ. ಶಿಡೆನೂರ, ಜಿ.ವಿ. ಹಿರೇಗೌಡರ, ಪರಮೇಶ ಚಿಕ್ಕಳ್ಳಿ, ಬಿ.ಎಚ್. ಚಲ್ಲಾಳ, ಆರ್.ಡಿ. ಹೊಂಬರಡಿ, ಮಹದೇವಗೌಡ ಪಾಟೀಲ, ಶಕುಂತಲಾ ಶಿವಮೊಗ್ಗ, ಪ್ರಭಾಕರ ಭಟ್, ನಂದಿನಿ ವಿರೂಪಣ್ಣ, ಧನರಾಜರಾಣಿ ಬಳ್ಳಾರಿ, ಮಹಾದೇವಿ ಗೌಡ, ಶರತ್ ಮಲ್ಲನಗೌಡ್ರ, ಎಸ್.ಎ. ವಜ್ರಕುಮಾರ, ಶಕುಂತಲಾ ಚಂದ್ರಕುಮಾರ್, ಆಶಾ ಪ್ರಸನ್ನಕುಮಾರ, ಅನ್ನಪೂರ್ಣ ಕಟಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಗೀತಾ ಜಂಬಗಿ ಸ್ವಾಗತಿಸಿದರು.
ಹೆಣ್ಣಿನ ಸಾಮರ್ಥ್ಯ ಅಡುಗೆ ಮನೆಯಿಂದ ಆಕಾಶದಗಲಕ್ಕೆ-ಡಾ. ದಾನಮ್ಮನವರ
ಹೆಣ್ಣು ಸಂಸಾರದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ. ಹೆಣ್ಣಿನ ಸಾಮರ್ಥ್ಯ ಕೇವಲ ಸಂಸಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಅಡುಗೆ ಮನೆಯಿಂದ ಹಿಡಿದು ಆಕಾಶದಗಲ ಕೆಲಸ ಮಾಡುವ ಸಾಮರ್ಥ್ಯವನ್ನು ಮಹಿಳೆ ಹೊಂದಿದ್ದಾಳೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.