ಮೊಬೈಲಿನಲ್ಲಿ ಮಾತನಾಡುತ್ತಿದ್ದ ಯುವಕ ಸಿಡಿಲು ಬಡಿದು ಸಾವು

| Published : Oct 31 2023, 01:15 AM IST

ಸಾರಾಂಶ

ಸಂಜೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡ ಪ್ರಮೋದ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದ. ಬಡ ಕುಟುಂಬದ ಪ್ರಮೋದ್‌ ಇತ್ತೀಚೆಗೆ ತಾನೇ ಬಟ್ಟೆ ಯಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ.
ಕನ್ನಡಪ್ರಭ ವಾರ್ತೆ ಉಡುಪಿ ಭಾನುವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಗೆ ಇಲ್ಲಿನ ಕೋಟ ಗ್ರಾಮದ ಕಿರಾಡಿ ಹಂಚಿನಮನೆ ಎಂಬಲ್ಲಿ ಯುವಕನೊಬ್ಬ ಬಲಿಯಾಗಿದ್ದಾರೆ. ಪ್ರಮೋದ್ ಶೆಟ್ಟಿ (23) ಮೃತರು. ಅವರು ಇಲ್ಲಿನ ನಿವಾಸಿ ಬಾಬಣ್ಣ ಶೆಟ್ಟಿ ಮತ್ತು ಬೇಬಿ ಶೆಟ್ಟಿ ದಂಪತಿ ಮಗ. ಸಂಜೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡ ಪ್ರಮೋದ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದ. ಬಡ ಕುಟುಂಬದ ಪ್ರಮೋದ್‌ ಇತ್ತೀಚೆಗೆ ತಾನೇ ಬಟ್ಟೆ ಯಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ತಂದೆತಾಯಿ ಮತ್ತು ಇಬ್ಬರು ಕಿರಿಯ ಸಹೋದದರರಿರುವ ಕುಟುಂಬಕ್ಕೆ ಆಸರೆಯಾಗಿದ್ದ. ಉತ್ತಮ ಕ್ರೀಡಾಪಟವೂ ಆಗಿದ್ದ. ಮರಬಿದ್ದು ಮನೆಗೆ ಹಾನಿ: ಕಾರ್ಕಳ ತಾಲೂಕಿನ ಇಸ್ಮಾಯಿಲ್ ಎಂಬವರ ಮನೆಗೆ ಗಾಳಿಮಳೆಯಿಂದ ಮರವೊಂದು ಉರುಳಿಬಿದ್ದು ಅವರಿಗೆ ಸುಮಾರು 10 ಸಾವಿರ ರು. ನಷ್ಟವಾಗಿದೆ. ಭಾನುವಾರ ರಾತ್ರಿ ಉಡುಪಿ ಜಿಲ್ಲೆಯಾದ್ಯಂತ ಸರಾಸರಿ 23.70 ಮಿ.ಮೀ. ಮಳೆ ದಾಖಲಾಗಿದೆ. ಅದರಲ್ಲಿ ಕಾರ್ಕಳ 32.40, ಕುಂದಾಪುರ 9.80, ಉಡುಪಿ 27.60, ಬೈಂದೂರು 7.40, ಬ್ರಹ್ಮಾವರ 25.50, ಕಾಪು 21.70, ಹೆಬ್ರಿ 54 ಮಿ.ಮೀ. ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಕೂಡ ಕರಾವಳಿಯಾದ್ಯಂತ ಗುಡುಗುಮಿಂಚು ಸಹಿತ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ.