ಸಾರಾಂಶ
ಮುಡಸಾಲಿ ಗ್ರಾಮದ ಶ್ರೀನಾಥ ಸೋಮಶೇಖರ ಹರಿಜಜ (20) ಧರ್ಮಾ ಜಲಾಶಯದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮತ್ತೋರ್ವ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮುಂಡಗೋಡ
ತಾಲೂಕಿನ ಮಳಗಿ ಧರ್ಮಾ ಜಲಾಶಯ ವೀಕ್ಷಿಸಲು ಹೋಗಿದ್ದ ಯುವಕನೋರ್ವ ನೀರಿನಲ್ಲಿ ಕೊಚ್ಚಿಹೋದ ಘಟನೆ ಬುಧವಾರ ಸಂಜೆ ನಡೆದಿದೆ.ತಾಲೂಕಿನ ಮುಡಸಾಲಿ ಗ್ರಾಮದ ಶ್ರೀನಾಥ ಸೋಮಶೇಖರ ಹರಿಜಜ (20) ಧರ್ಮಾ ಜಲಾಶಯದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮತ್ತೋರ್ವ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಮಳಗಿ ಧರ್ಮಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮುಡಸಾಲಿ ಗ್ರಾಮದಿಂದ ಆರು ಜನ ಸ್ನೇಹಿತರು ಜಲಾಶಯ ನೋಡಲು ಬಂದಿದ್ದರು. ಈ ವೇಳೆ ಜಲಾಶಯದ ಉಬ್ಬಿನ ಬಳಿ ಹೋದಾಗ ಏಕಾಏಕಿ ಇಬ್ಬರು ಯುವಕರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಅದರಲ್ಲಿ, ಓರ್ವ ಯುವಕನನ್ನು ಸ್ಥಳೀಯರು ಬಚಾವ್ ಮಾಡಿದ್ದಾರೆ. ಆದರೆ ಶ್ರೀನಾಥ ಹರಿಜನ ನೀರಿನಲ್ಲಿ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಮುಂಡಗೋಡ ಪೊಲೀಸರು ಹಾಗೂ ಅಗ್ನಿಶಾಮಕ ದಳ ತಂಡ ದೌಡಾಯಿಸಿದ್ದು, ಶೋಧ ಕಾರ್ಯಾಚರಣೆ ಕೈಗೊಂಡಿದೆ.ಬಿರುಗಾಳಿಗೆ ಮರ ಉರುಳಿ ಬೈಕ್ ಸವಾರ ಸಾವುಕನ್ನಡಪ್ರಭ ವಾರ್ತೆ ಯಲ್ಲಾಪುರಬಿರುಗಾಳಿಗೆ ಮರವೊಂದು ಉರುಳಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹಾಸಣಗಿ ಗ್ರಾಪಂ ವ್ಯಾಪ್ತಿಯ ಮಾಳಕೊಪ್ಪದ ಶಾಲೆಯ ಸಮೀಪ ಬುಧವಾರ ಸಂಭವಿಸಿದೆ.ಬಾಚನಹಳ್ಳಿ ಗ್ರಾಮದ ಕಬ್ಬಿನಗದ್ದೆ ನಿವಾಸಿ ವಿನಯ ಮಂಜುನಾಥ ಗಾಡಿಗ (೨೬) ಮೃತಪಟ್ಟ ದುರ್ದೈವಿ.ಈತ ಮಂಚೀಕೇರಿಯ ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಬೆಳಗ್ಗೆ ಅಂಗಡಿಗೆ ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮರ ಉರುಳಿ ವಿನಯ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಬೈಕ್ ಕೂಡಾ ನಜ್ಜುಗುಜ್ಜಾಗಿದೆ. ಮೃತರಿಗೆ ತಂದೆ, ತಾಯಿ ಸೇರಿದಂತೆ ಅಪಾರ ಬಂಧು- ಬಳಗವಿದೆ.
ಸ್ಥಳಕ್ಕೆ ತಹಸೀಲ್ದಾರ್ ಅಶೋಕ ಭಟ್, ಗ್ರೇಡ್-೨ ತಹಸೀಲ್ದಾರ್ ಸಿ.ಜಿ. ನಾಯ್ಕ, ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ಸಿದ್ದು ಗುಡಿ, ಮಂಚಿಕೇರಿ ಆರ್‌ಎಫ್‌ಒ ಅಮಿತ್ ಚವ್ಹಾಣ ಪರಿಶೀಲಿಸಿದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.