ಸಾರಾಂಶ
ಯುವಕನೊಬ್ಬ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ಪ್ರಸಿದ್ಧ ಯಾತ್ರಾಸ್ಥಳವಾದ ಮುತ್ತತ್ತಿಯಲ್ಲಿ ನಡೆದಿದೆ.
ಮಂಡ್ಯ: ಯುವಕನೊಬ್ಬ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ಪ್ರಸಿದ್ಧ ಯಾತ್ರಾಸ್ಥಳವಾದ ಮುತ್ತತ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಲಿಂಗರಾಜಪುರದ ಅಭಿಷೇಕ್ (21) ಮೃತಪಟ್ಟ ಯುವಕ. ಮೂವರು ಸ್ನೇಹಿತರೊಂದಿಗೆ ಅಭಿಷೇಕ್ ವಿಹಾರಕ್ಕೆ ಎಂದು ಗುರುವಾರ ಮಧ್ಯಾಹ್ನ ಕ್ಯಾಬ್‌ನಲ್ಲಿ ಮುತ್ತತ್ತಿಗೆ ಬಂದಿದ್ದರು. ಈ ವೇಳೆ ಈಜಲು ಕಾವೇರಿ ನದಿಗೆ ಇಳಿದ ಅಭಿಷೇಕ್ ನದಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಮೃತನ ದೇಹ ಪತ್ತೆಯಾಗಿದೆ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ನೀಡಲಾಗಿದೆ.