ಸಾರಾಂಶ
ಶಿರ್ವದಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವತಿಯೊಬ್ಬಳು ವಾಂತಿ ಮಾಡಿ ನಂತರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ತಕ್ಷಣ ಬಸ್ ಚಾಲಕ ಶಶಿಕಾಂತ್ ಮತ್ತು ನಿರ್ವಾಹಕ ಸಲೀಂ ಬಸ್ಸನ್ನು ಉಡುಪಿ ನಗರದ ಡಾ.ಟಿ.ಎಂ.ಪೈ ಆಸ್ಪತ್ರೆಗೆ ಕೊಂಡೊಯ್ದುರು.
ಕನ್ನಡಪ್ರಭ ವಾರ್ತೆ ಉಡುಪಿಬಸ್‌ನಲ್ಲಿ ತೀವ್ರ ಅಸ್ವಸ್ಥಗೊಂಡ ಯುವತಿಗಾಗಿ ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದ ಘಟನೆ ಸೋಮವಾರ ಉಡುಪಿಯಲ್ಲಿ ನಡೆದಿದೆ.
ಶಿರ್ವದಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವತಿಯೊಬ್ಬಳು ವಾಂತಿ ಮಾಡಿ ನಂತರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ತಕ್ಷಣ ಬಸ್ ಚಾಲಕ ಶಶಿಕಾಂತ್ ಮತ್ತು ನಿರ್ವಾಹಕ ಸಲೀಂ ಬಸ್ಸನ್ನು ಉಡುಪಿ ನಗರದ ಡಾ.ಟಿ.ಎಂ.ಪೈ ಆಸ್ಪತ್ರೆಗೆ ಕೊಂಡೊಯ್ದುರು. ಅಲ್ಲಿ ಆಕೆಯ ಗಂಭೀರ ಸ್ಥಿತಿಯನ್ನು ಗಮನಿಸಿ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಲಾಯಿತು.ಅಲ್ಲದೆ ಆಕೆಯ ಮನೆಯವರಿಗೂ ಮಾಹಿತಿ ನೀಡಿ, ಅವರು ಬರುವ ವರೆಗೆ ಕಾದು ನಂತರ ತಮ್ಮ ಕರ್ತವ್ಯಕ್ಕೆ ತೆರಳಿದರು. ಯುವತಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ ಈ ಮಾನವೀಯ ಕಾರ್ಯಕ್ಕೆ ಆಕೆಯ ಮನೆಯವರು ಮಾತ್ರವಲ್ಲದೇ ಬಸ್‌ನಲ್ಲಿದ್ದ ಇತರ ಸಹಪ್ರಯಾಣಿರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಮಂಗಳೂರಿನಲ್ಲಿಯೂ ಇದೇ ರೀತಿ ಬಸ್‌ನಲ್ಲಿ ಅಸ್ವಸ್ಥರಾದವರನ್ನು ಬಸ್ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದ ಇಂತಹದ್ದೇ ಘಟನೆ ನಡೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಖಾಸಗಿ ಬಸ್ ಸಿಬ್ಬಂದಿಯ ಈ ಮಾನವೀಯ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.