ಮೂಲತಃ ಕೆ.ಎಂ.ದೊಡ್ಡಿ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದ ಮಧು ಹೆಗ್ಗಡೆ ರಾತ್ರಿ ಆಲೂರು ಗ್ರಾಮದ ಬೀರೇಶ್ವರ ಜಾತ್ರೆಗೆ ಬಂದಿದ್ದನು. ಈ ವೇಳೆ ಪಾನಮತರಾಗಿದ್ದ ಚೆಂದಳ್ಳಿದೊಡ್ಡಿ ಗ್ರಾಮದ ನಾಲ್ವರು ಯುವಕರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯುವಕರ ಗುಂಪು ಶಾಮಿಯಾನ ಅಳವಡಿಸುವ ಚೂಪಾದ ರಾಡಿನಿಂದ ಮಧು ಹೆಗಡೆ ಹೊಟ್ಟೆಗೆ ತಿಳಿದು ಗಾಯಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಾನಮತ್ತ ಯುವಕರ ಗುಂಪೊಂದು ಓರ್ವ ಯುವಕನ ಮೇಲೆ ಮಾರಕಾಸ್ತ್ರದಿಂದ ತಿವಿದು ಗಾಯಗೊಳಿಸಿರುವ ಘಟನೆ ತಾಲೂಕಿನ ಆಲೂರು ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ಗುರುವಾರ ರಾತ್ರಿ ಜರುಗಿದೆ.

ತಾಲೂಕಿನ ಕೆ.ಎಂ.ದೊಡ್ಡಿ ಚೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕೆ.ಪಿ. ಮಧು ಹೆಗ್ಗಡೆ (21) ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದು, ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ.

ಮೂಲತಃ ಕೆ.ಎಂ.ದೊಡ್ಡಿ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದ ಮಧು ಹೆಗ್ಗಡೆ ರಾತ್ರಿ ಆಲೂರು ಗ್ರಾಮದ ಬೀರೇಶ್ವರ ಜಾತ್ರೆಗೆ ಬಂದಿದ್ದನು. ಈ ವೇಳೆ ಪಾನಮತರಾಗಿದ್ದ ಚೆಂದಳ್ಳಿದೊಡ್ಡಿ ಗ್ರಾಮದ ನಾಲ್ವರು ಯುವಕರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯುವಕರ ಗುಂಪು ಶಾಮಿಯಾನ ಅಳವಡಿಸುವ ಚೂಪಾದ ರಾಡಿನಿಂದ ಮಧು ಹೆಗಡೆ ಹೊಟ್ಟೆಗೆ ತಿಳಿದು ಗಾಯಗೊಳಿಸಿದ್ದಾರೆ.

ಘಟನೆಯಿಂದ ಅಸ್ವಸ್ಥ ಗೊಂಡಿದ್ದ ಈತನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.