ಸಾರಾಂಶ
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ 60 ಪರ್ಸಂಟ್ ಕಮೀಷನ ಪಡೆಯುವ ಭ್ರಷ್ಟ ಸರ್ಕಾರ ಆಗಿದೆ, ರಾಜ್ಯದಲ್ಲಿ ಮುಂದೆ ಯಾವುದೇ ಚುನಾವಣೆ ಬಂದರೂ ಈ ಪಕ್ಷಕ್ಕೆ ಮತದಾರರು ತಕ್ಕ ಶಾಸ್ತಿ ಮಾಡಲು ಸಜ್ಜಾಗಿದ್ದಾರೆ
ನರಗುಂದ: ದೆಹಲಿಯಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ಮಾಡಿದ ಎಎಪಿಗೆ ಅಲ್ಲಿಯ ಮತದಾರ ಪ್ರಭುಗಳು ತಕ್ಕ ಶಾಸ್ತಿ ಮಾಡಿ ಬಿಜೆಪಿಗೆ ಆರ್ಶೀವಾದ ಮಾಡಿದ್ದಾರೆ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಅವರು ಶನಿವಾರ ಸಂಜೆ ಪಟ್ಟಣದ ಛತ್ರಪತಿ ಶಿವಾಜ ಮಹಾರಾಜ ವೃತ್ತದಲ್ಲಿ ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ ಹಿನ್ನೆಲೆ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಮಾತನಾಡಿ, ದೆಹಲಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಆಮ್ಮಆದ್ಮಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಮತ್ತು ಸಚಿವರು ಅತೀ ಹೆಚ್ಚು ಭ್ರಷ್ಟಾಚಾರವನ್ನು ಕಳೆದ ಹತ್ತು ವರ್ಷದಲ್ಲಿ ಮಾಡಿ ಜೈಲಿಗೆ ಹೋಗಿದ್ದರಿಂದ ಈ ಚುನಾವಣೆಯಲ್ಲಿ ಮತದಾರ ಪ್ರಭುಗಳು ಆ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಿ, ಬಿಜೆಪಿಯ 48ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಿದ್ದು ಸಂತೋಷ ತಂದಿದೆ ಎಂದರು.ಗೆಲುವಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜಿ.ಪಿ. ನಡ್ಡಾ, ಗೃಹ ಸಚಿವ ಅಮಿತಾ ಶಾ ಅವರಿಗೆ ಅಭಿನಂದನೆ ತಿಳಿಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ 60 ಪರ್ಸಂಟ್ ಕಮೀಷನ ಪಡೆಯುವ ಭ್ರಷ್ಟ ಸರ್ಕಾರ ಆಗಿದೆ, ರಾಜ್ಯದಲ್ಲಿ ಮುಂದೆ ಯಾವುದೇ ಚುನಾವಣೆ ಬಂದರೂ ಈ ಪಕ್ಷಕ್ಕೆ ಮತದಾರರು ತಕ್ಕ ಶಾಸ್ತಿ ಮಾಡಲು ಸಜ್ಜಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಶಿವಾನಂದ ಮುತ್ತವಾಡ, ಅಜ್ಜಪ್ಪ ಹುಡೇ, ವಾಸು ಜೋಗಣ್ಣವರ, ಬಸು ಪಾಟೀಲ, ಡಾ.ಸಿ.ಕೆ. ರಾಚನಗೌಡ, ರಾಚಪ್ಪ ಅಳಗವಾಡಿ, ಚಂದ್ರಶೇಖರ ದಂಡಿನ, ಭೀಮಶಿ ಯಲಿಗಾರ, ರಾಜುಗೌಡ ಪಾಟೀಲ, ರಾಚನಗೌಡ ಪಾಟೀಲ, ಅನಿಲ ಧರಿಯಣ್ಣವರ, ಶಿವಾನಂದ ಕೋಟಿ, ಸಿದ್ದು ಹೂಗಾರ, ಸಂತೋಷ ಹಂಚಿನಾಳ, ವಿಠಲ ಹವಾಲ್ದಾರ ಸೇರಿದಂತೆ ಮುಂತಾದವರು ಇದ್ದರು.