ಪಾಂಡುರಂಗ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ/ ಶ್ರೀಪಾದ ದರ್ಶನ ಸಂಭ್ರಮ/ ಶ್ರದ್ದಾಭಕ್ತಿಯ ಉಪವಾಸ ವ್ರತಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಆಷಾಢ ಮಾಸದ ಏಕಾದಶಿ ಪ್ರಯುಕ್ತ ವಿಶೇಷ ವ್ರತಾಚರಣೆಯನ್ನು ನಗರ ಮತ್ತು ತಾಲೂಕಿನಾದ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ತಾಲೂಕಿನ ಪಾಲನಜೋಗಿಹಳ್ಳಿಯಲ್ಲಿರುವ ಪ್ರಸಿದ್ಧ ಶ್ರೀ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಭಕ್ತ ಮಂಡಲಿ ವತಿಯಿಂದ ಆಷಾಢ ಶುದ್ಧ ಏಕಾದಶಿ ಅಂಗವಾಗಿ 67ನೇ ವರ್ಷದ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ಬೆಳಗ್ಗೆ ಪಾಂಡುರಂಗ ಸ್ವಾಮಿಗೆ ಪಂಚಾಮೃತಾಭಿಷೇಕ ನಡೆಯಿತು. ಬೆಳ್ಳಿರಥದ ಹೂವಿನ ಪಲಕ್ಕಿ ಉತ್ಸವ, ವೀರಗಾಸೆ, ಡೊಳ್ಳು ಕುಣಿತ ಉತ್ಸವಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಲಾಯಿತು.

ಪಾಂಡುರಂಗ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯವರ ಸುರಭಿ ಭಜನಾ ಮಂಡಲಿಯಿಂದ ವಿಷ್ಣು ಸಹಸ್ರನಾಮ ಪಾರಾಯಣ, ಭಕ್ತಿಗೀತೆ, ಭಜನೆ ಹಾಗೂ ಅಖಂಡ ಭಜನೆ, ಮಂಜುಶ್ರೀ ಮೆಲೋಡಿಸ್ ಅವರಿಂದ ಭಕ್ತಿಗೀತೆಗಳ ವಾದ್ಯಗೋಷ್ಠಿ ನಡೆಯಿತು. ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ದರ್ಜಿಪೇಟೆ ವಿಠೋಬ ದೇವಾಲಯ :

ದರ್ಜಪೇಟೆ ವಿಠೋಬ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ದೇವಾಲಯದಲ್ಲಿ ರುಕ್ಷ್ಮಿಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗಸ್ವಾಮಿ ಪಾದಸ್ಪರ್ಶ ದರ್ಶನ (ಪಾದದರ್ಶನ) ಏರ್ಪಡಿಸಲಾಗಿತ್ತು. ಭಕ್ತರು ಸ್ವತಃ ದೇವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಮಹಾರಾಷ್ಟ್ರದ ಪಂಡರಾಪುರದಲ್ಲಿ ಈ ವರ್ಷದ ದಂಡಿ ಉತ್ಸವ ಮಾಡುವ ಅವಕಾಶ ದೊಡ್ಡಬಳ್ಳಾಪುರದ ಭಕ್ತಾದಿಗಳಿಗೆ ಸಿಕ್ಕಿದೆ ಎಂದು ದೇವಾಲಯದ ಸಿಬ್ಬಂದಿ ತಿಳಿಸಿದ್ದಾರೆ.ಏಕಾದಶಿ ಉಪವಾಸ ವ್ರತಾಚರಣೆ:


ಆಷಾಢ ಏಕಾದಶಿಯಂದು ಉಪವಾಸ ವ್ರತ ಕೈಗೊಂಡರೆ ವ್ಯಕ್ತಿ ಮಾಡಿದ ಪಾಪಗಳೆಲ್ಲ ನಾಶವಾಗುತ್ತವೆ. ದೇವರು ಸಂತುಷ್ಟನಾಗುತ್ತಾನೆ, ಎಂಬ ನಂಬಿಕೆಯಿದೆ. ಹೀಗಾಗಿ ಬಹಳಷ್ಟುಭಕ್ತಾದಿಗಳು ವಿಶೇಷವಾಗಿ ವಿಷ್ಣು ಹಾಗೂ ಪಾಂಡುರಂಗನ ಭಕ್ತರು ಉಪವಾಸ ವ್ರತ ಕೈಗೊಂಡಿದ್ದರು.

-------------

ಫೋಟೋ-

26ಕೆಡಿಬಿಪಿ1- ಪಾಲನಜೋಗಿಹಳ್ಳಿಯ ಶ್ರೀ ಪಾಂಡುರಂಗ ದೇವಾಲಯದಲ್ಲಿ ವಿಶೇಷಾಲಂಕಾರ.

--

26ಕೆಡಿಬಿಪಿ2- ದರ್ಜಿಪೇಟೆಯ ವಿಠೋಬ ದೇವಾಲಯದಲ್ಲಿ ರುಕ್ಮಿಣಿ, ಸತ್ಯಭಾಮ ಸಹಿತ ಪಾಂಡುರಂಗ ಸ್ವಾಮಿಗೆ ವಿಶೇಷ ಅಲಂಕಾರ.

--

26ಕೆಡಿಬಿಪಿ3- ದರ್ಜಿಪೇಟೆಯ ವಿಠೋಬ ದೇವಾಲಯದಲ್ಲಿ ರುಕ್ಮಿಣಿ, ಸತ್ಯಭಾಮ ಸಹಿತ ಪಾಂಡುರಂಗ ಸ್ವಾಮಿ ಪಾದದರ್ಶನಕ್ಕೆ ಸರತಿಯಲ್ಲಿ ನಿಂತಿರುವ ಭಕ್ತರು.