ಶ್ರೀಚೆಲುವನಾರಾಯಣಸ್ವಾಮಿಗೆ ಅಭಿಷೇಕ, ಮಂಟಪ ವಾಹನೋತ್ಸವ

| Published : May 29 2024, 12:50 AM IST / Updated: May 29 2024, 12:51 AM IST

ಶ್ರೀಚೆಲುವನಾರಾಯಣಸ್ವಾಮಿಗೆ ಅಭಿಷೇಕ, ಮಂಟಪ ವಾಹನೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಚೆಲುವನಾರಾಯಣಸ್ವಾಮಿಗೆ ಅಭಿಷೇಕ ಹಾಗೂ ಮಂಟಪ ವಾಹನೋತ್ಸವ ನೆರವೇರುವ ಮೂಲಕ ವಿದ್ವಾನ್ ರಘುಸಿಂಹ ಕೊಳಲು ವಾದನದ ಜೊತೆಗೆ ಸಂಗೀತ-ನೃತ್ಯಸಪ್ತಾಹ ಮಂಗಳವಾರ ಆರಂಭವಾಯಿತು. 7 ದಿನಗಳ ಕಾಲ ನಡೆಯುವ ಪಲ್ಲವೋತ್ಸವ- ಸಂಗೀತ ಸಾಪ್ತಾಹದಲ್ಲಿ ಪ್ರತಿ ದಿನ ಚೆಲುವನಾರಾಯಣಸ್ವಾಮಿಗೆ ಅಭಿಷೇಕ. ಮಧ್ಯಾಹ್ನ ಸಂಗೀತ ಸೇವೆ ಹಾಗೂ ಸಂಜೆ ವಾಹನೋತ್ಸವಗಳು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿಗೆ ಅಭಿಷೇಕ ಹಾಗೂ ಮಂಟಪ ವಾಹನೋತ್ಸವ ನೆರವೇರುವ ಮೂಲಕ ಪಲ್ಲವೋತ್ಸವ ಹಾಗೂ ಕಲಾರಾಧನೆಯ ಸೇವೆ ಅಂಗವಾಗಿ ವಿದ್ವಾನ್ ರಘುಸಿಂಹ ಕೊಳಲು ವಾದನದ ಜೊತೆಗೆ ಸಂಗೀತ-ನೃತ್ಯಸಪ್ತಾಹ ಮಂಗಳವಾರ ಆರಂಭವಾಯಿತು.

7 ದಿನಗಳ ಕಾಲ ನಡೆಯುವ ಪಲ್ಲವೋತ್ಸವ- ಸಂಗೀತ ಸಾಪ್ತಾಹದಲ್ಲಿ ಪ್ರತಿ ದಿನ ಚೆಲುವನಾರಾಯಣಸ್ವಾಮಿಗೆ ಅಭಿಷೇಕ. ಮಧ್ಯಾಹ್ನ ಸಂಗೀತ ಸೇವೆ ಹಾಗೂ ಸಂಜೆ ವಾಹನೋತ್ಸವಗಳು ನಡೆಯಲಿದೆ.

ಮೇ 29ರಂದು ಸಂಗೀತ- ನೃತ್ಯಸಾಪ್ತಾಹದ ಅಂಗವಾಗಿ ವಿದುಶಿ ಸ್ನೇಹಾ ನಾರಾಯಣ್ ತಂಡದಿಂದ ಭರತನಾಟ್ಯ ಶೇಷ ವಾಹನೋತ್ಸವ, ಮೇ 30 ರಂದು ವಿದ್ವಾನ್ ಶಿವರಾಮ್ ತಂಡದಿಂದ ಎಲೆಕ್ಟ್ರಿಕ್ ಮ್ಯಾಂಡಲಿನ್, ಚಂದ್ರಮಂಡಲ ವಾಹನೋತ್ಸವ, ಮೇ 31 ರಂದು ವಿದ್ಯಾನ್ ಅಭಿಷೇಕ್‌ ಸಿಂಹ ಮತ್ತು ವಿದುಶಿ ಸುರಭಿ ಪ್ರಸಾದ್‌ರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಅಶ್ವವಾಹನೋತ್ಸವ, ಜೂ1ರಂದು ವಿದ್ವಾನ್ ವಿಷ್ಣುವೆಂಕಟೇಶ್ ರಿಂದ ಮ್ಯಾಂಡಲಿನ್, ಆನೇವಾಹನ ಜೂನ್ 2ರಂದು ವಿದುಶಿ ರಮ್ಯಾಕಡಾಂಬಿ ಭರತನಾಟ್ಯ, ಹನುಮಂತವಾಹನೋತ್ಸವ ಸಮಾರೋಪದ ದಿನವಾದ ಜೂನ್ 3 ರಂದು ವಿದುಶಿ ರಜನೀಕಲ್ಲೂರು ಭರತನಾಟ್ಯ ಗರುಡವಾಹನೋತ್ಸವ ನಡೆಯಲಿದೆ.

7 ದಿನಗಳ ಪಲ್ಲವೋತ್ಸವದಲ್ಲಿ ಭಕ್ತರೂ ಸಹ ಅಭಿಷೇಕ ಸೇವೆ ಹಾಗೂ ವಾಹನೋತ್ಸವ ಸೇವೆ ಮಾಡುವ ಕೊನೆ ದಿನ ಗರುಡೋತ್ಸವ ಸೇವೆ ಮಾಡಲೂ ಸಹ ಅವಕಾಶವಿದೆ. ಭಕ್ತರು ದೇವಾಲಯದ ಕಚೇರಿಯನ್ನು ಸಂಪರ್ಕಿಸಿ ಮಹೋತ್ಸವದಲ್ಲಿ ಸೇವೆ ಮಾಡಿಸಬಹುದಾಗಿದೆ ಎಂದು ದೇವಾಲಯದ ಇಒ ಎಚ್.ಎಸ್.ಮಹೇಶ್ ಹಾಗೂ ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮಾಹಿತಿ ನೀಡಿದ್ದಾರೆ. ವಿದ್ವಾನ್ ರಘುಸಿಂಹರಿಂದ 2 ಗಂಟೆಗೂ ಹೆಚ್ಚು ಕಾಲ ಕೊಳಲುವಾದನ

ಸಂಗೀತ ಸಾಪ್ತಾಹದಲ್ಲಿ ಪ್ರಥಮ ದಿನ ವಿದ್ವಾನ್ ರಘುಸಿಂಹ ಕೊಳಲು ವಾದನದ ಸಂಗೀತ ಸುಧೆ ಹರಿಸಿ ಚೆಲುವನಾರಾಯಣಸ್ವಾಮಿಗೆ ಶಾಸ್ತ್ರೀಯ ಸಂಗೀತದ ಕಲಾರಾಧನೆ ಸೇವೆ ಮಾಡಿದರು.

ಕೇಳುಗರಿಲ್ಲದಿದ್ದರೂ ತನ್ಮಯತೆಯಿಂದ 2 ಹೆಚ್ಚು ಕಾಲ ಕೀರ್ತನೆಗಳನ್ನು ನುಡಿಸಿ ನವರಾಗ ಮಾಲಿಕಾ, ಶ್ರೀಮನ್ನಾರಾಯಣ, ಸರಸ್ವತೀನ ಮೋಸ್ತುತೇ, ಎಂತಮುದ್ದೋ, ಸಾರಸಮುಖಿ ಇತರ ಅಮೋಘ ಕೀರ್ತನೆಗಳ ಇಂಪು ಸಾಕ್ಷಾತ್ ವೈಂಕುಂಠದ ದರ್ಶನ ನೀಡಿ ಸಂಗೀತಲೋಕಕ್ಕೆ ಕೊಂಡೊಯ್ದಿತ್ತು.

ಅಭಯ್ ಸಂಪಗೆತ್ತಾಯ, ವಯೋಲಿನ್ ವಿದ್ಯಾಶಂಕರ್ ಮೃದಂಗ ಪಕ್ಕವಾದ್ಯ ನುಡಿಸುವ ಮೂಲಕ ಸಂಗೀತ ಕಚೇರಿಗೆ ಕಳೆ ನೀಡಿದರು. ಮೇ 28ರಿಂದ ಜೂನ್ 3 ರವರೆಗೆ ಮೇಲುಕೋಟೆಯ ಶ್ರೀರಾಮಾನುಜ ಸಹಸ್ರಮಾನೋತ್ಸವ ಸೇವಾ ಸಂಗೀತ-ನೃತ್ಯ ಸಾಪ್ತಾಹ ನಡೆಸುತ್ತಿದೆ ಎಂದು ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ.ಆನಂದಾಳ್ವಾರ್ ತಿಳಿಸಿದ್ದಾರೆ.