ಅಣುಸ್ಥಾವರದಂತೆ ಬಲ್ಡೋಟಾ ಸ್ಟೀಲ್‌ ಕಾರ್ಖಾನೆ ರದ್ದುಪಡಿಸಿ

| Published : Jul 20 2025, 01:19 AM IST

ಅಣುಸ್ಥಾವರದಂತೆ ಬಲ್ಡೋಟಾ ಸ್ಟೀಲ್‌ ಕಾರ್ಖಾನೆ ರದ್ದುಪಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅಣುಸ್ಥಾವರ ಸ್ಥಾಪನೆ ಕೈಬಿಟ್ಟಿರುವ ಸರ್ಕಾರದ ನಿರ್ಧಾರ ಸ್ವಾಗತಿಸಿರುವ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿ, ತಕ್ಷಣೆ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ರದ್ದುಪಡಿಶಿ ಲಿಖಿತ ಆದೇಶ ಹೊರಡಿಸುವಂತೆ ಆಗ್ರಹಿಸಿದೆ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಜಿಲ್ಲೆಯಲ್ಲಿ ಅಣುಸ್ಥಾವರ ಸ್ಥಾಪಿಸುವುದನ್ನು ಕೈಬಿಟ್ಟಿರುವ ಸರ್ಕಾರ ನಗರಕ್ಕೆ ಹೊಂದಿಕೊಂಡು ತಲೆ ಎತ್ತುತ್ತಿರುವ ಬಲ್ಡೋಟಾ ಕಾರ್ಖಾನೆ ಸ್ಥಾಪನೆಗೂ ರೆಡ್‌ ಸಿಗ್ನಲ್‌ ನೀಡುವುದು ಯಾವಾಗವೆಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.

ಅಣುಸ್ಥಾವರ ಸ್ಥಾಪನೆ ಕೈಬಿಟ್ಟಿರುವ ಸರ್ಕಾರದ ನಿರ್ಧಾರ ಸ್ವಾಗತಿಸಿರುವ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿ, ತಕ್ಷಣೆ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ರದ್ದುಪಡಿಶಿ ಲಿಖಿತ ಆದೇಶ ಹೊರಡಿಸುವಂತೆ ಆಗ್ರಹಿಸಿದೆ.

ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡೇ ಈಗಾಗಲೇ ಎಂಎಸ್‌ಪಿಎಲ್ ಕಾರ್ಖಾನೆ ಇದ್ದು ಇದನ್ನು ವಿಸ್ತರಣೆ ಮಾಡಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಪ್ರಾರಂಭಿಸಿದರೆ ಕೊಪ್ಪಳ ನಗರವನ್ನೇ ಸ್ಥಳಾಂತರಿಸಬೇಕಾಗುತ್ತದೆ. ಹೀಗಾಗಿ ಕೊಪ್ಪಳ ಇರಬೇಕು ಇಲ್ಲವೇ ಬಲ್ಡೋಟಾ ಇರಬೇಕು. ಒಟ್ಟಿಗೆ ಎರಡೂ ಇರಲು ಸಾಧ್ಯವಿಲ್ಲ ಎಂದಿರುವ ಹೋರಾಟಗಾರರು, ಕಾರ್ಖಾನೆ ಸ್ಥಾಪನೆ ರದ್ದುಪಡಿಸಬೇಕೇಂದು ಒತ್ತಾಯಿಸಿದೆ.

ಸಚಿವ ಸಂಪುಟದಲ್ಲಿ ಪ್ರಸ್ತಾಪ:

ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸುವ ಕುರಿತು ಈಗಾಗಲೇ ಆಗಿರುವ ಪ್ರಾಥಮಿಕ ಸರ್ವೇ ಕೈಬಿಟ್ಟು, ರಾಜ್ಯದ ವಿವಿಧೆಡೆ ಸರ್ವೇ ಮಾಡುವಂತೆ ಸಚಿವ ಸಂಪುಟದಲ್ಲಿ ತೀರ್ಮಾನಿಸುವ ವೇಳೆ ಬಲ್ಡೋಟಾ ವಿಷಯವೂ ಚರ್ಚೆಗೆ ಬಂದಿದೆ. ಕೊಪ್ಪಳಕ್ಕೆ ಹೊಂದಿಕೊಂಡು ಈಗಾಗಲೇ ಸಾಕಷ್ಟು ಕಾರ್ಖಾನೆಗಳಿದ್ದು ಅದರಿಂದ ಸಾವಿರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈಗ ಮತ್ತೊಂದು ಬೃಹತ್ ಕಾರ್ಖಾನೆ ಸ್ಥಾಪಿಸಲು ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಿರುವಾಗ ಅಣುಸ್ಥಾವರ ಕೊಪ್ಪಳ ಜಿಲ್ಲೆಯಲ್ಲಿ ಬೇಡವೇ ಬೇಡ ಎಂದು ಸಚಿವ ಶಿವರಾಜ ತಂಗಡಗಿ ಸೇರಿದಂತೆ ಅನೇಕರು ಧ್ವನಿ ಎತ್ತಿದ್ದಾರೆ. ಜತೆಗೆ ಬಲ್ಡೋಟಾ ಸ್ಥಾಪನೆಗೂ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇದನ್ನು ಸಹ ರಾಜ್ಯ ಸರ್ಕಾರ ಪರಾಮರ್ಶೆ ಮಾಡುತ್ತಿದ್ದು, ಅದರ ಬಗ್ಗೆ ಸೂಕ್ತ ತೀರ್ಮಾನ ಆಗಬೇಕು ಎನ್ನುವ ಪ್ರಸ್ತಾಪ ಮಾಡಿದ್ದಾರೆ. ಆದರೆ, ಕೇವಲ ಅಣುಸ್ಥಾವರ ಸರ್ವೇ ಕುರಿತ ಪ್ರಸ್ತಾಪ ಮಾತ್ರ ಸಚಿವ ಸಂಪುಟ ಸಭೆಯಲ್ಲಿದ್ದದ್ದರಿಂದ ಬಲ್ಡೋಟಾ ವಿಷಯದ ಕುರಿತು ಚರ್ಚೆ ಮುಂದುವರಿಯಲಿಲ್ಲ. ಆದರೂ ಕೆಲ ಸಚಿವರು ಕೊಪ್ಪಳ ಬಳಿ ಬಲ್ಡೋಟಾ ಸ್ಥಾಪನೆಗೆ ತೀವ್ರ ವಿರೋಧ ಇದ್ದು, ಖುದ್ದು ಅಲ್ಲಿಯ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಸಹ ವಿರೋಧಿಸಿದ್ದಾರೆ ಎನ್ನುವುದು ಸಹ ಚರ್ಚೆಯಾಗಿದೆ ಎನ್ನಲಾಗಿದೆ.ಕೊಪ್ಪಳ ಜಿಲ್ಲೆಯಲ್ಲಿ ಅಣುಸ್ಥಾವರ ಸ್ಥಾಪಿಸುವುದನ್ನು ಕೈಬಿಟ್ಟಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ. ಅದರಂತೆ ಬಲ್ಡೋಟಾ ಕುರಿತು ಸಹ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ನಿರ್ಣಯ ಕೈಗೊಂಡು, ಲಿಖಿತ ಆದೇಶ ಮಾಡಬೇಕಾಗಿದೆ.

ಅಲ್ಲಮಪ್ರಭು ಬೆಟ್ಟದೂರು ಹೋರಾಗಾರರು