ಸಾರಾಂಶ
ಕಾಳಸಂತೆಗೆ ಮಾರಾಟವಾಗಿದ್ದ ಭಾರೀ ಪ್ರಮಾಣದ ಅನ್ನಭಾಗ್ಯ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸರು ಪತ್ತೆಹಚ್ಚಿ ಮಾಲು ಲಾರಿ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕಾಳಸಂತೆಗೆ ಮಾರಾಟವಾಗಿದ್ದ ಭಾರೀ ಪ್ರಮಾಣದ ಅನ್ನಭಾಗ್ಯ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಪತ್ತೆಹಚ್ಚಿ ಮಾಲು ಹಾಗೂ ಲಾರಿ ಸಮೇತ ಆರೋಪಿಯೋರ್ವನನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಸೋಮವಾರ ಸೋಮವಾರಪೇಟೆಯಲ್ಲಿ ನಡೆದಿದೆ.ಕೊಣನೂರಿನ ಇದ್ರೀಸ್ ಎಂಬಾತ ಸೋಮವಾರಪೇಟೆ ತೋಟಗಾರಿಕೆ ಇಲಾಖೆಯ ಸಮೀಪ ಕಡಿಮೆ ಬೆಲೆಗೆ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿ ಬೇರೆ ಕಡೆಗೆ ಸಾಗಿಸುವ ದಂದೆಯಲ್ಲಿ ತೊಡಗಿದ್ದ ಸಂದರ್ಭ ಈ ದಾಳಿ ನಡೆದಿದೆ. ಲಾರಿ ಸಮೇತ ಈತನಿಂದ 1,42,970 ರು.. ಮೌಲ್ಯದ 4200 ಕೆ.ಜಿ. ಅಕ್ಕಿ ವಶ ಪಡಿಸಿಕೊಳ್ಳಲಾಗಿದೆ.
ಈತನಿಗೆ ಅನ್ನಭಾಗ್ಯ ಅಕ್ಕಿಯನ್ನು ಮಾರಾಟ ಮಾಡಿದವರಿಗೆ ಏನು ಶಿಕ್ಷೆ ಎಂಬುದನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಹಣ ನೀಡಿ ಅಕ್ಕಿ ಪಡೆದುಕೊಂಡು ಬೇರೆಡೆಗೆ ಸಾಗಿಸಿದವನನ್ನು ವಶಕ್ಕೆ ಪಡೆಯಲಾಗಿದೆ ಆದರೆ ಆತನಿಗೆ ಅಕ್ಕಿ ನೀಡಿದವರಿಗೂ ಕೂಡ ಶಿಕ್ಷೆ ಆಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.