ಸಾರಾಂಶ
ಮಂಡ್ಯ : ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೊದಲ ಹಂತದ ತರಬೇತಿಗೆ ಗೈರುಹಾಜರಾದ 51 ಅಧಿಕಾರಿ-ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ. ಭಾನುವಾರ (ಏ.7) ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿ ( PRO & APRO) ಗಳಿಗೆ ಮೊದಲ ಹಂತದ ತರಬೇತಿಯನ್ನು ಎಲ್ಲ ತಾಲೂಕುಗಳಲ್ಲಿ ಆಯೋಜಿಸಲಾಗಿತ್ತು. ತರಬೇತಿಗೆ 51 ಜನ ಗೈರು ಹಾಜರಾಗಿದ್ದು, ಗೈರು ಹಾಜರಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿಗೆ ಸೂಚಿಸಿದ್ದಾರೆ.
ಇನ್ನು 5 ದಿನದೊಳಗಾಗಿ ಗೈರು ಹಾಜರಾದವರ ವಿರುದ್ಧ ಆರ್.ಪಿ ಆಕ್ಟ್ ಪ್ರಜಾಪ್ರತಿನಿಧಿ ಕಾಯ್ದೆ1951 ಕಲಾಂ 134 ರಂತೆ ಕಾನೂನು ರೀತ್ಯಾ ಶಿಸ್ತು ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣಾ ವೀಕ್ಷಕರ ನೇಮಕ: ದೂರುಗಳಿದ್ದಲ್ಲಿ ಸಲ್ಲಿಸಿ
ಮಂಡ್ಯ : ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಚುನಾವಣಾ ಆಯೋಗ ವೀಕ್ಷಕರನ್ನು ನೇಮಕ ಮಾಡಲಾಗಿದೆ.
ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ವಿಧಾನಸಭಾ ವಲಯಗಳಿಗೆ ಸಾಮಾನ್ಯ ಚುನಾವಣಾ ವೀಕ್ಷಕರಾದ ನೀರಾಜ್ ಕುಮಾರ್ ಮೊ-9035056471 ಹಾಗೂ ಇವರ ಸಮನ್ವಯಾಧಿಕಾರಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ರಂಗಸ್ವಾಮಿ ಮೊ-9986239654 ಇವರನ್ನು ಸಂಪರ್ಕಿಸಬಹುದು.
ಮಳವಳ್ಳಿ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೆಚ್ಚ ವೀಕ್ಷಕರಾದ ರೋಹಿತ್ ಅಸುದಾನಿ ಮೊ-9035056472 ಹಾಗೂ ಇವರ ಸಮನ್ವಯಾಧಿಕಾರಿ ಕೆ.ಹೆಚ್.ಬಿ ಸಹಾಯಕ ಕಾರ್ಯಪಾಲಕ ಅಭಿಯಂತರ ಲಾರೆನ್ಸ್ ಮೊ-9448872232 ಇವರನ್ನು ಸಂಪರ್ಕಿಸಬಹುದು.ಮೇಲುಕೋಟೆ, ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೆಚ್ಚ ವೀಕ್ಷಕರಾದ ಕುಮಾರ್ ಪ್ರಿಯತಮ್ ಅಶೋಕ್ ಮೊ-9035056473 ಹಾಗೂ ಇವರ ಸಮನ್ವಯಾಧಿಕಾರಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಾಬಾಸಾಬ್ ಮೊ-9448037547 , ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ವಿಧಾನಸಭಾ ವಲಯಗಳಿಗೆ ಪೊಲೀಸ್ ವೀಕ್ಷಕರಾದ ದೀಪ ಸತ್ಯನ್ ಮೊ-9035056474 ಹಾಗೂ ಇವರ ಸಮನ್ವಯಾಧಿಕಾರಿ ಸಿ.ಇ.ಎನ್ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಮಂಜೇಗೌಡ ಹೆಚ್.ಜಿ ಮೊ-9480804878 ಇವರನ್ನು ಸಂಪರ್ಕಿಸಬಹುದು ತಿಳಿಸಿದ್ದಾರೆ.