ಕಳಸ: ತಾಲೂಕಿನ ಸಂಸೆ ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಗೆ ಅಧಿಕಾರಿಗಳು ಪದೇ ಪದೇ ಗೈರು ಹಾಜರಿಯಾಗುತ್ತಿರುವುದರಿಂದ ಬೇಸತ್ತು ಪಂಚಾಯ್ತಿಯ ಸದಸ್ಯರು ಮಂಗಳವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು.

ಕಳಸ: ತಾಲೂಕಿನ ಸಂಸೆ ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಗೆ ಅಧಿಕಾರಿಗಳು ಪದೇ ಪದೇ ಗೈರು ಹಾಜರಿಯಾಗುತ್ತಿರುವುದರಿಂದ ಬೇಸತ್ತು ಪಂಚಾಯ್ತಿಯ ಸದಸ್ಯರು ಮಂಗಳವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು.

ಬಿ.ಸಿ. ಮಂಜುನಾಥ್‌, ಶಮಂತ್‌ ಶಾಂತರಾಮ್‌, ಶಂಕರೇಗೌಡ ಸೇರಿದಂತೆ ಐದು ಮಂದಿ ಸದಸ್ಯರು ತಮ್ಮ ರಾಜೀನಾಮೆ ಪತ್ರವನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಈವರೆಗೆ 3 ಬಾರಿ ಗ್ರಾಮ ಸಭೆ ಕರೆಯಲಾಗಿದೆ. ಈ ಎಲ್ಲಾ ಸಭೆಗಳಿಗೆ ತಾಪಂನ ಕಾರ್ಯನಿರ್ವಹಕ ಅಧಿಕಾರಿಗಳು, ಪಿಡಿಒ, ಕಾರ್ಯದರ್ಶಿ

ಗೈರು ಹಾಜರಿಯಾಗಿದ್ದಾರೆ. ಹಲವು ಬಾರಿ ಪೋನ್‌ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ದಿನವೂ ಕೂಡ ಗೈರು ಹಾಜರಿಯಾಗಿದ್ದರು. ಉದ್ಯೋಗ ಖಾತ್ರಿ ಯೋಜನೆ, ಕಸ ವಿಲೇವಾರಿ, ಜಲಜೀವನ್‌ ಮಿಷನ್‌ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿ ನಡೆದಿದ್ದರೂ ಸಂಬಂಧಪಟ್ಟವರಿಗೆ ಬಿಲ್‌ ಪಾವತಿಯಾಗಿಲ್ಲ, ಪಂಚಾಯ್ತಿ ವ್ಯಾಪ್ತಿಯ ಜನರು ಆಗಾಗ ಪಂಚಾಯ್ತಿಗೆ ಕೆಲಸದ ನಿಮಿತ್ತ ಬಂದು ಹೋಗುತ್ತಿದ್ದಾರೆ. ಆದರೆ, ಅಧಿಕಾರಿಗಳು ಸಿಗುತ್ತಿಲ್ಲ, ಹಾಗಾಗಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಬೈದು ಹೋಗುತ್ತಿದ್ದಾರೆ ಎಂದು ಸದಸ್ಯರು ತಿಳಿಸಿದ್ದಾರೆ.

ಈ ಕಾರಣದಿಂದ ಗ್ರಾಮ ಪಂಚಾಯ್ತಿ ಸದಸ್ಯರು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

5 ಕೆಸಿಕೆಎಂ 6

ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯ್ತಿ ಸದಸ್ಯರು ಮಂಗಳವಾರ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು.