ಕಾಂಗ್ರೆಸ್ಸಿನಿಂದಲೇ ರಾಜ್ಯಪಾಲರ ಅಧಿಕಾರ ದುರುಪಯೋಗ: ಟೆಂಗಿನಕಾಯಿ

| Published : Sep 24 2024, 01:58 AM IST

ಕಾಂಗ್ರೆಸ್ಸಿನಿಂದಲೇ ರಾಜ್ಯಪಾಲರ ಅಧಿಕಾರ ದುರುಪಯೋಗ: ಟೆಂಗಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಹಗರಣ ಮುಖ್ಯಮಂತ್ರಿಗೆ ಉರುಳಾಗುವುದು ನಿಶ್ಚಿತ. ಯಾವುದೇ ಕಾರಣಕ್ಕೂ ರಾಜಭವನದಿಂದ ಲೋಕಾಯುಕ್ತರ ದೂರು ಪ್ರಕರಣ ಸೋರಿಕೆ ಆಗಿಲ್ಲ. ರಾಜ್ಯಪಾಲರಿಗೆ ದೂರು ಬಂದಾಗ ಸ್ಪಷ್ಟತೆ ಕೇಳಿದ್ದಾರೆ ಅಷ್ಟೇ, ಅದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟರೆ ಸಾಕು.

ಹುಬ್ಬಳ್ಳಿ:

ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದವರೇ ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಬಂದಿದ್ದು, ಇತಿಹಾಸವನ್ನು ತೆರೆದು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಬಂದ ನಂತರ ಯಾವ ರಾಜ್ಯಪಾಲರ ಅಧಿಕಾರ ದುರುಪಯೋಗ ಆಗಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಅರ್ಕಾವತಿ ರೀಡೋ ಹಗರಣದ ಬಗ್ಗೆ ಗಂಭೀರ ಸ್ವರೂಪದ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗೆ ರಾಜ್ಯಪಾಲರು ಸ್ಪಷ್ಟತೆ ಕೇಳಿದ್ದಾರೆ. ಅದನ್ನು ಕೇಳುವುದು ಅಧಿಕಾರ ದುರುಪಯೋಗವೇ? ರಾಜ್ಯಪಾಲರು ತಪ್ಪು ಮಾಡಿದಾಗ ತಪ್ಪು, ಸರಿ ಮಾಡಿದಾಗ ಸರಿ ಎಂದು ಹೇಳುವ ಅಧಿಕಾರ ಹೊಂದಿದ್ದಾರೆ. ವಿನಾಕಾರಣ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು

ಸೋರಿಕೆ ಆಗಿಲ್ಲ:

ಮುಡಾ ಹಗರಣ ಮುಖ್ಯಮಂತ್ರಿಗೆ ಉರುಳಾಗುವುದು ನಿಶ್ಚಿತ. ಯಾವುದೇ ಕಾರಣಕ್ಕೂ ರಾಜಭವನದಿಂದ ಲೋಕಾಯುಕ್ತರ ದೂರು ಪ್ರಕರಣ ಸೋರಿಕೆ ಆಗಿಲ್ಲ. ರಾಜ್ಯಪಾಲರಿಗೆ ದೂರು ಬಂದಾಗ ಸ್ಪಷ್ಟತೆ ಕೇಳಿದ್ದಾರೆ ಅಷ್ಟೇ, ಅದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟರೆ ಸಾಕು. ಸ್ಪಷ್ಟನೆ ಕೇಳಿದ್ದನ್ನೆ ಕಾಂಗ್ರೆಸ್ಸಿನವರು ದೊಡ್ಡದಾಗಿ ಬಿಂಬಿಸಿ ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ರಾಜ್ಯಪಾಲರ ದಿಟ್ಟ ನಿರ್ಧಾರ:

ಅರ್ಕಾವತಿ ಡಿನೋಟಿಪೈ ವಿಚಾರದಲ್ಲಿ ಸಿಎಂ ಸ್ಪಷ್ಟತೆಯಿಂದ ನಡೆದುಕೊಳ್ಳುತ್ತಿಲ್ಲ. ಈ ಹಿಂದೆ ಸಾಕಷ್ಟು ಬಾರಿ ಅರ್ಕಾವತಿ ರೀಡೋ ಹಗರಣ ಕುರಿತು ಚರ್ಚೆ ಆಗಿತ್ತು. ಸಿಎಂ ಅವರೇ ಸಾಕಷ್ಟು ಬಾರಿ ಮಾತನಾಡಿದ್ದರು. ಈಗ ಮುಡಾ, ವಾಲ್ಮೀಕಿ ನಿಗಮದಲ್ಲಿ ಹಗರಣಗಳು ನಡೆದಿವೆ. ಹಗರಣದ ಬಗ್ಗೆ ಸ್ಪಷ್ಟನೆ ಕೇಳುವ ಮೂಲಕ ರಾಜ್ಯಪಾಲರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.