ಎಬಿವಿಪಿ ಪಿಯುಸಿ ಕ್ರೀಡಾಕೂಟ: ನಿಟ್ಟೆ ಪಿಯು ಕಾಲೇಜು ಚಾಂಪಿಯನ್

| Published : Dec 14 2024, 12:46 AM IST

ಎಬಿವಿಪಿ ಪಿಯುಸಿ ಕ್ರೀಡಾಕೂಟ: ನಿಟ್ಟೆ ಪಿಯು ಕಾಲೇಜು ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ನಿಟ್ಟೆ ಪದವಿಪೂರ್ವ ಕಾಲೇಜು

ಕನ್ನಡಪ್ರಭ ವಾರ್ತೆ ಉಡುಪಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಪಿಯುಸಿ ವಿದ್ಯಾರ್ಥಿಗಳ ಕ್ರೀಡಾಕೂಟವು ಅಜ್ಜರಕಾಡು ಜಿಲ್ಲಾ ಮೈದಾನದಲ್ಲಿ ಗುರುವಾರ ಸಂಪನ್ನಗೊಂಡಿತು. ಸಮಗ್ರ ಪ್ರಶಸ್ತಿಯಲ್ಲಿ ನಿಟ್ಟೆ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ, ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಹಾಗೂ ಉಡುಪಿ ಮಹಾತ್ಮ ಗಾಂಧಿ ಪದವಿಪೂರ್ವ ಕಾಲೇಜು ತೃತೀಯ ಸ್ಥಾನವನ್ನು ಗಳಿಸಿತು.ಕಾರ್ಯಕ್ರಮದ ಉದ್ಘಾಟಕರಾಗಿ ಯುವ ಉದ್ಯಮಿ ಅಜಯ್ ಪಿ. ಶೆಟ್ಟಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಎಬಿವಿಪಿ ಹಿರಿಯ ಕಾರ್ಯಕರ್ತರಾದ ಡಾ.ಶಿವಾನಂದ್ ನಾಯಕ್ ಮತ್ತು ಮಂಗಳೂರು ವಿಭಾಗ ಖೇಲೋ ಭಾರತ್ ಪ್ರಮುಖರಾದ ಸ್ವಸ್ತಿಕ್ ಪೂಜಾರಿ, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ ಕೆ. ಹಾಗೂ ತಾಲೂಕು ಸಂಚಾಲಕ ಶ್ರೇಯಸ್ ಅಂಚನ್ ಉಪಸ್ಥಿತರಿದ್ದರು.ವೈಯಕ್ತಿಕ ಮತ್ತು ರಿಲೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಿಭಾಗಗಳ ಒಟ್ಟು 22 ಸ್ಪರ್ಧೆಗಳು ಯಶಸ್ವಿಯಾಗಿ ಸಂಪನ್ನಗೊಂಡು ಸಮಾರೋಪ ಸಮಾರಂಭವು ನಡೆಯಿತು. ವೇದಿಕೆಯಲ್ಲಿ ಎಬಿವಿಪಿ ಜಿಲ್ಲಾ ಪ್ರಮುಖರಾದ ರಾಜಶಂಕರ್, ಮಂಗಳೂರು ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ, ಜಿಲ್ಲಾ ಸಂಚಾಲಕರಾದ ಕಾರ್ತಿಕ್ ಎಂ., ನಗರ ಕಾರ್ಯದರ್ಶಿಯಾದ ಮಾಣಿಕ್ಯ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸುಗಂಧಿ ಹಾಗೂ ಅನುಷಾ ಕಾರ್ಯಕ್ರಮವನ್ನು ನಿರೂಪಿಸಿದರು.ಕ್ರೀಡಾಕೂಟದ ಸಂದರ್ಭ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿಯಾದ ಚಂದ್ರಶೇಖರ್ ಮರಾಠಿ, ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ-ಸಂಚಾಲಕರಾದ ಶ್ರೀವತ್ಸ ಡಿ. ಗಾಂವ್ಕರ್, ವಿಭಾಗ ಪ್ರಮುಖರಾದ ನವೀನ್, ಜಿಲ್ಲಾ ಎಸ್‌ಎಫ್‌ಡಿ ಪ್ರಮುಖರಾದ ಕಿಶೋರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.