ಕ್ರೀಡೆಗಳಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ: ಮಧು ಜಿ.ಮಾದೇಗೌಡ

| Published : Jan 01 2025, 12:02 AM IST

ಕ್ರೀಡೆಗಳಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ: ಮಧು ಜಿ.ಮಾದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ 60 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಐದು ದಿನಗಳ ಕಾಲ ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡು ಹಲವು ಸಾಮಾಜ ಮುಖಿ ಕೆಲಸಗಳನ್ನು ಮಾಡಿ ಬಡ ಜನತೆಗೆ ನೆರವಾಗಿ, ಕ್ರೀಡಾಸಕ್ತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸಿ ವಿಭಿನ್ನ ಕಾರ್ಯಕ್ರಮ ನೆರವೇರಿಸಿರುವ ಅಭಿಮಾನಿಗಳಿಗೆ ನಾನು ಚಿರ ಋಣಿಯಾಗಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಗೆಲುವಿಗೆ ನಿರಂತರ ಅಭ್ಯಾಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಕಿವಿಮಾತು ಹೇಳಿದರು.

ಇಲ್ಲಿನ ಜಿ.ಮಾದೇಗೌಡ ಸ್ಮಾರಕ ಕ್ರೀಡಾಂಗಣದಲ್ಲಿ ಮಧು ಜಿ.ಮಾದೇಗೌಡ, ಆಶಯ್‌ಮಧು ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಮತ್ತು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಎಂಜಿಎಂ-ಕಪ್ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು.

ನಗರ ಪ್ರದೇಶಕ್ಕಿಂದ ಗ್ರಾಮೀಣ ಪ್ರದೇಶದಲ್ಲಿ ವಾಲಿಬಾಲ್ ಪಂದ್ಯಾವಳಿ ಸಾಕಷ್ಟು ಜನ ಪ್ರಿಯಗೊಂಡು ಕ್ರೀಡಾಸಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಉತ್ತಮ ಆರೋಗ್ಯ ಕಾಪಾಡಿ ಕೊಂಡು ಸದೃಡವಾಗಲು ವಾಲಿಬಾಲ್ ಅಭ್ಯಾಸ ಸಹಕಾರಿಯಾಗಲಿದೆ ಎಂದರು.

ನನ್ನ 60 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಐದು ದಿನಗಳ ಕಾಲ ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡು ಹಲವು ಸಾಮಾಜ ಮುಖಿ ಕೆಲಸಗಳನ್ನು ಮಾಡಿ ಬಡ ಜನತೆಗೆ ನೆರವಾಗಿ, ಕ್ರೀಡಾಸಕ್ತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸಿ ವಿಭಿನ್ನ ಕಾರ್ಯಕ್ರಮ ನೆರವೇರಿಸಿರುವ ಅಭಿಮಾನಿಗಳಿಗೆ ನಾನು ಚಿರ ಋಣಿಯಾಗಿದ್ದೇನೆ ಎಂದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಸಗರಹಳ್ಳಿ ತಂಡ ಪ್ರಥಮ, ಸ್ಟಾರ್ ಮದ್ದೂರು ದ್ವಿತೀಯ, ವಿಸಿಸಿ ಶಿವಪುರ ತೃತೀಯ ಸ್ಥಾನ ಗಳಿಸಿದರೆ, ವಾಲಿಬಾಲ್ ಪಂದ್ಯಾವಳಿಯಲ್ಲಿ ಕೆ.ಎಂ.ದೊಡ್ಡಿ ಮಾರ್ನಿಂಗ್ ಬಾಯ್ಸ್ ಪ್ರಥಮ, ಎಸ್‌ವಿಎನ್‌ಎಸ್ ಕೆ.ಎಂ.ದೊಡ್ಡಿ ದ್ವಿತೀಯ ಮತ್ತು ಮಂಡ್ಯ ತಂಡ ತೃತೀಯ ಬಹುಮಾನ ಗಳಿಸಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ಬಿ. ಗಿರೀಶ್, ಮುಖಂಡ ಕಾರ್ಕಹಳ್ಳಿ ಸ್ವರೂಪ್ ಬಸವೇಗೌಡ, ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಮಹದೀವಸ್ವಾಮಿ, ಗ್ರಂಥಪಾಲಕ ಎ.ಎಸ್. ಸಂಜೀವ್, ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಎಸ್. ಸುನೀಲ್ ಕುಮಾರ್, ಶೋಭ, ಉಮೇಶ್, ಜಗದೀಶ್, ಕಳ್ಳಿಮೆಳ್ಳೆದೊಡ್ಡಿ ಪ್ರಸನ್ನಕುಮಾರ್, ಎಸ್. ಪ್ರಮೋದ್, ಸುಮಂತ್‌ಗೌಡ, ನಿಖಿಲ್‌ಕುಮಾರ್, ಕೆ.ಟಿ. ಪುಟ್ಟಸ್ವಾಮಿ, ಶಿವಕುಮಾರ್ ಸೇರಿದಂತೆ ಮುಂತಾದವರಿದ್ದರು.