ಸಾರಾಂಶ
ಕನ್ನಡಪ್ರಭ ವಾರ್ತೆ ಹಾರೂಗೇರಿ
ಕಬ್ಬಡಿ ಆಟವಾಡಲು ಬಂದ ಎಲ್ಲ ಕ್ರೀಡಾಪಟುಗಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾ ಸ್ಫೂರ್ತಿಯಿಂದ ಆಟವಾಡಿ ಎಂದು ಸಂಸ್ಥೆಯ ಅಧ್ಯಕ್ಷ ವಿವೇಕ ನಾರಗೊಂಡ ಕಿವಿಮಾತು ಹೇಳಿದರು.ಪಟ್ಟಣ ಸಮೀಪದ ಹಾರೂಗೇರಿ ಕ್ರಾಸ್‌ದ ಎಸ್.ಎಂ.ನಾರಗೊಂಡ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ಸರ್ಕಾರ, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಹಾಗೂ ಎಸ್.ಎಂ.ನಾರಗೊಂಡ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಸನ್ 2025-26ನೇ ಸಾಲಿನ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಕ್ರೀಡಾ ಧ್ವಜಾರೋಹಣ, ಧ್ವಜ ವಂದನೆ ಹಾಗೂ ಕ್ರೀಡಾ ಜ್ಯೋತಿ ಸ್ವೀಕರಿ ಮಾತನಾಡಿದ ಅವರು, ನಮ್ಮ ಸಂಸ್ಥೆಯ ಆವರಣದಲ್ಲಿ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಸಲು ಅವಕಾಶ ನೀಡಿದ್ದಕ್ಕೆ ಕ್ರೀಡಾ ಇಲಾಖೆಗೆ ಕೃತಜ್ಞತೆಗಳು ಸಲ್ಲಿಸುತ್ತೇನೆ. ಅದರಂತೆ ರಾಜ್ಯಮಟ್ಟದ ಕ್ರೀಡೆಗಳನ್ನು ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲೂಕುಗಳಿಂದ 8 ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ತಂಡದ ಆಟಗಾರರು ಪಂದ್ಯಾವಳಿಗೆ ಆಗಮಿಸಿದ್ದರು. ನಾಣ್ಯ ಚಿಮ್ಮವ ಮೂಲಕ ಕಬ್ಬಡಿ ಪಂದ್ಯಾವಳಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ.ಗಿರೀಶ ನಾರಗೊಂಡ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಆನಂದಗೌಡ ಪಾಟೀಲ, ಬಸವರಾಜ ಚೌಗಲಾ, ಬಾಬುರಾವ ನಡೋಣಿ, ಸಂತೋಷ ಶಿಂಗಾಡಿ, ಕುಡಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಪ್ರಾಚಾರ್ಯ ಪ್ರಶಾಂತ.ಎಲ್.ಎಚ್, ಅಜಯ ಮೋನೆ, ಕುಶಾಲ ಶೆಟ್ಟಿ, ಬಾಳೇಶ ನಾಯಿಕ, ವೈ.ಬಿ.ಮಾಚಕನೂರ, ಉದಗಟ್ಟಿ ಉಪಸ್ಥಿತರಿರುವರು. ಮಹಾಂತೇಶ ಮುಗಳಖೋಡ ನಿರೂಪಿಸಿ, ವಂದಿಸಿದರು.