ಕ್ರೀಡೆಯಲ್ಲಿ ಸೋಲು ಗೆಲುವವನ್ನು ಸಮಾನವಾಗಿ ಸ್ವೀಕರಿಸಿ: ಸಾಬಣ್ಣ ವಗ್ಗರ್

| Published : Aug 08 2025, 01:00 AM IST

ಕ್ರೀಡೆಯಲ್ಲಿ ಸೋಲು ಗೆಲುವವನ್ನು ಸಮಾನವಾಗಿ ಸ್ವೀಕರಿಸಿ: ಸಾಬಣ್ಣ ವಗ್ಗರ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಅಕ್ಷರ ದಾಸೋಹ ಯೋಜನೆಯ ಸಹನಿರ್ದೇಶಕ ಸಾಬಣ್ಣ ವಗ್ಗರ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಅಕ್ಷರ ದಾಸೋಹ ಯೋಜನೆಯ ಸಹನಿರ್ದೇಶಕ ಸಾಬಣ್ಣ ವಗ್ಗರ್ ಹೇಳಿದರು.

ತಾಲ್ಲೂಕಿನ ಚಿರತ್ನಾಳ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ದೇವಿ ಕ್ಯಾಂಪ್ ಮತ್ತು ಶರಣ ಬಸವೇಶ್ವರ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಚಿರತ್ನಾಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಗಡದಿನ್ನಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಡಿದರು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಇದರಿಂದ ಸೃಜನಶೀಲತೆ ಬೆಳೆಯುತ್ತದೆ ಎಂದರು.

ಶರಣ ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ್ ಬಾವಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ವೀರೇಶಗೌಡ, ಬಿಆರ್ಪಿಗಳಾದ ಹುಲುಗಪ್ಪ, ಮೈನುದ್ದೀನ್, ರವಿ ಪವಾರ್, ಗ್ರಾಮ ಪಂಚಾಯತ್ ಸದಸ್ಯರಾದ ವೀರೇಶ ಸಿರುಗುಪ್ಪ, ರೇಣುಕಾ, ಲಕ್ಷ್ಮಿ, ಸಣ್ಣಮಲ್ಲಪ್ಪ, ಶರಣಪ್ಪ, ಆರೋಗ್ಯ ಇಲಾಖೆ ಮುಪ್ಪಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಷಣ್ಮುಖಗೌಡ, ಗಿರೀಶ್ ವಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿಠಲ್, ಮುಖ್ಯಶಿಕ್ಷಕರಾದ ಶ್ರೀಶೈಲಪ್ಪ ಕೌದಿ, ಜಗದೀಶ್ ನಂದಿ, ಸರ್ಕಾರಿ ನೌಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಭರತ್ ಕುಮಾರ್, ನಿರ್ದೇಶಕ ಅಂಬರೀಶ್ ಮಲ್ಲಾಪುರ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕ ಮಾರೆಪ್ಪ ಕ್ರೀಡಾಕೂಟದ ಪ್ರತಿಜ್ಞಾವಿಧಿ ಬೋಧಿಸಿದರು. ಪಗಡದಿನ್ನಿ ಹಾಗೂ ದೇವಿ ಕ್ಯಾಂಪ್ ಎರಡು ವಲಯದ 20 ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.