ಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

| Published : Mar 16 2024, 01:49 AM IST

ಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಬಳಿಕ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಬಳಿಕ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದರು.

ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣಗೊಂಡ ಲೇಔಟ್‌ಗಳಿಗೆ ಸಂಬಂಧಿಸಿ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಈ ಹಿಂದೆ ಲೇಔಟ್‌ಗಳನ್ನು ಅಭಿವೃದ್ಧಿಪಡಿಸದೇ ಇದ್ದರೂ ಅವುಗಳನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದ್ದು ಇದಕ್ಕೆ ಸಂಬಂಧಿಸಿದ ದೂರು ಸಲ್ಲಿಸಿ ವರ್ಷ ಕಳೆಯುತ್ತಾ ಬಂದಿದೆ. ಆದರೆ, ಯಾವುದೇ ಕ್ರಮವಾಗಿಲ್ಲವೆಂದಾಗ ಲೋಕಾಯುಕ್ತ ಸಿಪಿಐ ಆನಂದ ಟಕ್ಕಣ್ಣವರು ಈಗಾಗಲೇ ನಿಮ್ಮ ದೂರಿಗೆ ಸಂಬಂಧಿಸಿದ ಎಲ್ಲ ಪರಿಶೀಲನಾ ಹಂತ ಮುಗಿದಿದೆ. ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ತಮ್ಮ ದೂರು ವಿಚಾರಣೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಅಲ್ಲಿಂದ ಮಾಹಿತಿ ಬಂದ ಕೂಡಲೇ ತಮಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.

ಇನ್ನೋರ್ವ ಸಾಮಾಜಿಕ ಕಾರ್ಯಕರ್ತ ಸುರೇಶಕುಮಾರ ಹಜೇರಿ ಪಟ್ಟಣದ ಪುರಸಭೆಯವರು ಪುರಸಭೆಗೆ ಸಂಬಂಧಿತ ಸರ್ಕಾರಿ ಜಾಗಯನ್ನು ಪರಭಾರೆ ಮಾಡಿ ಬೇರೆಯವರ ಹೆಸರಿಗೆ ಜಾಗ ಮಾಡಿದ್ದಾರೆ. ಈ ಮೊದಲು ಪುರಸಭೆಗೆ ಸಂಬಂಧಿತ ಉತಾರೆ ಮತ್ತು ಸದ್ಯ ಜಾಗ ಬೇರೆಯವರ ಹೆಸರಿಗೆ ಪರಭಾರೆಗೊಂಡಿರುವ ಜಾಗೆಯ ಉತ್ತಾರೆಯ ಜೊತೆಗೆ ಅಧಿಕೃತ ದಾಖಲೆಗಳನ್ನು ಲೋಕಾಯುಕ್ತರ ಮುಂದೆ ಹಾಜರಪಡಿಸಿದಾಗ ಲೋಕಾಯುಕ್ತ ಅಧಿಕಾರಿ ಆನಂದ ಟಕ್ಕಣ್ಣವರ ಅವರು ಈ ಎಲ್ಲ ದಾಖಲೆಗಳೊಂದಿಗೆ ೧೯೨ ಫಾರ್ಮ್ ತುಂಬಿ ಕೊಡಲು ಹೇಳಿದರಲ್ಲದೇ ಈ ಕುರಿತು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಳ್ಳುವದಾಗಿ ಹೇಳಿದರು.

ಇನ್ನೂಳಿದಂತೆ ಕಾರನೂರ ಗ್ರಾಮದ ಸ್ಮಶಾನ ಜಾಗಗೆ ಸಂಬಂಧಿಸಿ ಮತ್ತು ತಹಸೀಲ್ದಾರ್‌ ಕಾರ್ಯಾಲಯಕ್ಕೆ ಸಂಬಂಧಿಸಿ ಅಲ್ಲದೇ ಪುರಸಭೆಗೆ ಸಂಬಂಧಿತ ಸಿಎ ಸೈಟ್‌ಗಳಿಗೆ ಸಂಬಂಧಿಸಿ ಕೆಲವು ದೂರುಗಳು ಬಂದವಲ್ಲದೇ ಇದಕ್ಕೆ ಸಂಬಂಧಿಸಿದ ಕೆಲವು ದೂರುಗಳನ್ನು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಕೆಲವು ದೂರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರಮುಖೇನ ಮಾಹಿತಿ ಪಡೆದು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ವರದಿ ಸಲ್ಲಿಸುತ್ತೇವೆಂದು ಪತ್ರಿಕೆಗೆ ಲೋಕಾಯುಕ್ತ ಸಿಪಿಐ ಆನಂದ ಟಕ್ಕಣ್ಣವರ ಅವರು ಮಾಹಿತಿ ನೀಡಿದರು.

ಈ ಸಮಯದಲ್ಲಿ ಲೋಕಾಯುಕ್ತ ಸಿಪಿಐ ಆನಂದ ಡೋಣಿ, ಎಸ್.ಆಯ್.ಅಮರಖೇಡ, ಶಂಕರ ಕಟ್ಟೆ, ಶ್ರೀಶೈಲ ಎಂ ಬಳಗಾನೂರ, ಎಸ್.ಕೆ.ಚವ್ಹಾಣ, ವಾಶೀಂ ಅಕ್ಕಲಕೋಟ, ತಹಸೀಲ್ದಾರ್‌ ಕೀರ್ತಿ ಚಾಲಕ, ತಾಪಂ ಇಒ ಬಸವಂತ್ರಾಯಗೌಡ ಬಿರಾದಾರ, ಪುರಸಭಾ ಮುಖ್ಯಾಧಿಕಾರಿ ಮೋಹನ್ ಜಾಧವ ಇತರರು ಇದ್ದರು.