ರಾಜ್ಯ ಹೆದ್ದಾರಿ ಭೂತನಕಾಡು ಬಳಿಯಲ್ಲಿ ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಗೊಂಡಿದ್ದು ಬೈಕ್ ಸವಾರ ಹೆಚ್ಚಿನ ಚಿಕಿತ್ಸೆ ಕೊಂಡೋಯ್ಯುವ ಸಂದರ್ಭ ಮೃತ ಹೊಂದಿರುವ ಘಟನೆ ಗುರುವಾರ ಅಪರಾಹ್ನ ನಡೆದಿದೆ. ಸುಂಟಿಕೊಪ್ಪ ಸಮೀಪದ ಕಾನ್ ಬೈಲ್ - ಬೈಚನಹಳ್ಳಿ ಗ್ರಾಮದ ನಿವಾಸಿ ಪಡ್ಡಂಬೈಲು ಧನಂಜಯ (51) ಮೃತರು.

ಸುಂಟಿಕೊಪ್ಪ: ರಾಜ್ಯ ಹೆದ್ದಾರಿ ಭೂತನಕಾಡು ಬಳಿಯಲ್ಲಿ ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಗೊಂಡಿದ್ದು ಬೈಕ್ ಸವಾರ ಹೆಚ್ಚಿನ ಚಿಕಿತ್ಸೆ ಕೊಂಡೋಯ್ಯುವ ಸಂದರ್ಭ ಮೃತ ಹೊಂದಿರುವ ಘಟನೆ ಗುರುವಾರ ಅಪರಾಹ್ನ ನಡೆದಿದೆ. ಸುಂಟಿಕೊಪ್ಪ ಸಮೀಪದ ಕಾನ್ ಬೈಲ್ - ಬೈಚನಹಳ್ಳಿ ಗ್ರಾಮದ ನಿವಾಸಿ ಪಡ್ಡಂಬೈಲು ಧನಂಜಯ (51) ಮೃತರು.ಚೆಟ್ಟಳ್ಳಿ ಕಡೆಯಿಂದ ಸುಂಟಿಕೊಪ್ಪ ಕಡೆಗೆ ಆಗಮಿಸುತ್ತಿದ್ದ ರಿಡ್ಜ್ ಕಾರು ಸುಂಟಿಕೊಪ್ಪ ಕಡೆಯಿಂದ ಚೆಟ್ಟಳ್ಳಿ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಚೆಟ್ಟಳ್ಳಿ ಸಮೀಪದ ಭೂತನಕಾಡು ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ರಾಜ್ಯ ಹೆದ್ದಾರಿ ಬದಿಯಲ್ಲಿ ಮತ್ತೊಂದು ಕಾರಿಗೆ ಡಿಕ್ಕಿಗೊಂಡಿತು. ಈ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಚಿಂತಾಜನಕಾರಾಗಿದ್ದ ಧನಂಜಯ ಅವರನ್ನು ಮಡಿಕೇರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ರಾತ್ರಿ ಮಾರ್ಗಮಧ್ಯದ ಸುಳ್ಯ ಬಳಿ ಕೊನೆಯುಸಿರು ಎಳೆದಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಖಾರು ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಮತರಿಸಲಾಯಿತು.