ಸಾರಾಂಶ
ಮದೀನಾ ಇನ್ನು ೭೦ ಕಿಮೀ ಇರುವಾಗ ಕಾರಿನ ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಮುಂಡಗೋಡ: ಪಟ್ಟಣದಿಂದ ಹಜ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಪಟ್ಟಣದ ರೋಣ್ ಮೆಡಿಕಲ್ ಮಾಲೀಕ ಫಯಾಜ ಅಹ್ಮದ್ ರೋಣ್ (೪೫), ಪತ್ನಿ ಆಫ್ರಿನ್‌ಬಾನು (೪೧) ಹಾಗೂ ಅಣ್ಣನ ಮಗ ಐವಾನ್ ರೋಣ್ (೧೬) ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಮೃತ ಫಯಾಜ ಅಹ್ಮದ ಅವರ ಪುತ್ರರಾದ ಪೈಜಾನ್ ಹಾಗೂ ಫತೀನ್ ಈ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಮಾ. ೨೬ರಂದು ಪಟ್ಟಣದಿಂದ ಫಯಾಜಅಹ್ಮದ ಕುಟುಂಬ ಸಮೇತ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿತ್ತು. ಸೌದಿಯಲ್ಲಿ ನೆಲೆಸಿರುವ ಅವರ ಸಹೋದರನ ಕುಟುಂಬದೊಂದಿಗೆ ಸೇರಿ ಕಾರಿನಲ್ಲಿ ಮದೀನಾಕ್ಕೆ ಹೊರಟಿದ್ದ ವೇಳೆ, ಮದೀನಾ ಇನ್ನು ೭೦ ಕಿಮೀ ಇರುವಾಗ ಕಾರಿನ ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಪಟ್ಟಣದಲ್ಲಿ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.