ಸಾರಾಂಶ
ಬಾದಾಮಿ: ವೇಗವಾಗಿ ಚಾಲನೆ ಮಾಡಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತಪಡಿಸಿದ ಟಿಪ್ಪರ್ ಚಾಲಕನಿಗೆ 20 ತಿಂಗಳು ಜೈಲು ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.
ಬಾದಾಮಿ: ವೇಗವಾಗಿ ಚಾಲನೆ ಮಾಡಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತಪಡಿಸಿದ ಟಿಪ್ಪರ್ ಚಾಲಕನಿಗೆ 20 ತಿಂಗಳು ಜೈಲು ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.
ರಾಮಪ್ಪ ಲಾಲಸಾಬ ಸಾಲಮಂಟಪ ಶಿಕ್ಷೆಗೊಳಗಾದ ಅಪರಾಧಿ. 2020ರ ಸೆಪ್ಟೆಂಬರ್ 25ರಂದು ರಾಮಪ್ಪ ಲಾಲಸಾಬ ಸಾಲಮಂಟಪ ಟಿಪ್ಪರ್ ತಾಲೂಕಿನ ಹಲಕುರ್ಕಿ ಮಾರ್ಗವಾಗಿ ಹೋಗುವಾಗ ಹಿರೇಮುಚ್ಚಳಗುಡ್ಡ ಹತ್ತಿರ ಟ್ರ್ಯಾಕ್ಟರ್ ಹಿಂದಿಕ್ಕುವ ಆತುರದಲ್ಲಿ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡಿಸಿದ್ದರು. ಈ ಅಪಘಾತದಲ್ಲಿ ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಸುರೇಶ ಕಿಳ್ಳೆಕ್ಯಾತರ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮಲ್ಲಪ್ಪ ಕಂಬಾರ, ಟ್ರ್ಯಾಕ್ಟರ್ ಚಾಲಕ ಸುಭಾಸ ಗೌಡರ ಗಂಭೀರ ಗಾಯಗೊಂಡಿದ್ದರು. ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಬಾದಾಮಿ ಪಿ.ಎಸ್.ಐ ಪಕ್ಷಾಶ ಬಣಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಬಾದಾಮಿ ಸಿ.ಪಿ.ಐ ರಮೇಶ ಹಾನಾಪೂರ ತನಿಖೆ ನಡೆಸಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪ್ರಧಾನ ದಿವಾಣಿ ಹಾಗೂ ಜೆ.ಎಂ.ಎಫ್.ಸಿ. ಬದಾಮಿ ನ್ಯಾಯಾಲಯದ ನ್ಯಾಯಾಧೀಶ ಹರೀಶ ಜಾಧವ ಆರೋಪಿಗೆ 1 ವರ್ಷ 8 ತಿಂಗಳು ಶಿಕ್ಷೆ, ₹9500 ದಂಡ ವಿಧಿಸಿ ಜು.19ರಂದು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಅಭಿಯೋಜಕ ನಯೀಮ್ ಅಬ್ಬಾಸ ಇದ್ದಲಗಿ ವಾದ ಮಂಡಿಸಿದ್ದರು.