ಅಪಘಾತ: ಗದಗ ಮೂಲಕ ಇಬ್ಬರ ಸಾವು

| Published : Nov 21 2024, 01:03 AM IST

ಸಾರಾಂಶ

ಶಿರಾ : ತಾಲೂಕಿನ ಕಡವಿಗೆರೆ ಸಮೀಪ ರಾ.ಹೆ. 48ರಲ್ಲಿ ಕಾರೊಂದು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 2 ವರ್ಷದ ಮಗು ಸೇರಿ ಗದಗ ಜಿಲ್ಲೆ ಮುಂಡರಗಿ ಮೂಲದ ಇಬ್ಬರು ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಶಿರಾ : ತಾಲೂಕಿನ ಕಡವಿಗೆರೆ ಸಮೀಪ ರಾ.ಹೆ. 48ರಲ್ಲಿ ಕಾರೊಂದು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 2 ವರ್ಷದ ಮಗು ಸೇರಿ ಗದಗ ಜಿಲ್ಲೆ ಮುಂಡರಗಿ ಮೂಲದ ಇಬ್ಬರು ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಗುರುರಾಜು (29) ಹಾಗೂ 2 ವರ್ಷದ ಮಗು ರಿಶಾಂಕ್ ಸ್ಥಳದಲ್ಲೇ ಸಾವನ್ನಪಿದ್ದು, ಪತ್ನಿ ಹರ್ಷಿತಾ 26 ವರ್ಷ ಗಂಭೀರ ಗಾಯಗೊಂಡಿದ್ದಾರೆ. ವಿಪರೀತ ಮಂಜು ಕವಿದಿದ್ದ ಕಾರಣ ಕಾರು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಗಾಯಗೊಂಡಿರುವ ಹರ್ಷಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.