ಸಾರಾಂಶ
ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬು ಸುಟ್ಟು ನಾಶವಾದ ಘಟನೆ ತಾಲೂಕಿನ ಬೀಡಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಖಾನಾಪುರ
ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬು ಸುಟ್ಟು ನಾಶವಾದ ಘಟನೆ ತಾಲೂಕಿನ ಬೀಡಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.ಬೀಡಿ ಗ್ರಾಮದ ರೈತರಾದ ಗಂಗಾಧರ ಜವಳಿ, ಪ್ರಕಾಶ ಬಾಬಶೇಟ, ಮಹಾಬಳೇಶ್ವರ ಚವಲಗಿ, ಕಲ್ಲಪ್ಪ ಮಂಗುಮಳಿ, ನಾರಾಯಣ ಕಾಶೀಲಕರ ಮತ್ತು ರಮೇಶ ಹೊಸಮನಿ ಅವರಿಗೆ ಸೇರಿದ ಕಬ್ಬಿನ ಗದ್ದೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಕ್ರಮೇಣ ಅಕ್ಕಪಕ್ಕದ ಗದ್ದೆಗಳಿಗೆ ಹರಡಿದೆ. ಸುದ್ದಿ ತಿಳಿದ ಕೂಡಲೇ ಸ್ಥಳೀಯ ರೈತರು ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟು ಬೆಂಕಿ ಬೇರೆಡೆ ಹರಡದಂತೆ ನಿಯಂತ್ರಿಸಿದ್ದಾರೆ. ಅಂದಾಜು 25-20 ಎಕರೆ ಪ್ರದೇಶದಲ್ಲಿ ಬೆಳದಿದ್ದ ಕಬ್ಬು ಬೆಂಕಿಗಾಹುತಿ ಆಗಿದ್ದು, ನೊಂದ ರೈತರಿಗೆ ಪರಿಹಾರ ಒದಗಿಸುವಂತೆ ಶಾಸಕ ವಿಠ್ಠಲ ಹಲಗೇಕರ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.