ಆಕಸ್ಮಿಕ ಬೆಂಕಿ: ಒಣಗಿದ ಮರಗಳು ಸುಟ್ಟು ಭಸ್ಮ

| Published : Feb 25 2024, 01:47 AM IST

ಸಾರಾಂಶ

ಹಾರೋಹಳ್ಳಿ: ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಒಂದನೇ ಹಂತದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಒಣಗಿದ ಮರಗಳು ಸುಟ್ಟು ಕರಕಲಾಗಿವೆ. ಕೈಗಾರಿಕಾ ಪ್ರದೇಶದಲ್ಲಿರುವ ಇಆರ್‌ಎಲ್‌ ಕಾರ್ಖಾನೆ ಘಟಕದ ಹಿಂಭಾಗ ಆಕಸ್ಮಿಕ ಬೆಂಕಿ ಕಂಡು ಬಂದಿದೆ.ಈ ಘಟಕ ಎರಡು ಎಕರೆ ಜಾಗದಲ್ಲಿದ್ದು, ಅತಿ ಹೆಚ್ಚು ಒಣಗಿದ ಮರಗಳಿವೆ.

ಹಾರೋಹಳ್ಳಿ: ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಒಂದನೇ ಹಂತದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಒಣಗಿದ ಮರಗಳು ಸುಟ್ಟು ಕರಕಲಾಗಿವೆ. ಕೈಗಾರಿಕಾ ಪ್ರದೇಶದಲ್ಲಿರುವ ಇಆರ್‌ಎಲ್‌ ಕಾರ್ಖಾನೆ ಘಟಕದ ಹಿಂಭಾಗ ಆಕಸ್ಮಿಕ ಬೆಂಕಿ ಕಂಡು ಬಂದಿದೆ.ಈ ಘಟಕ ಎರಡು ಎಕರೆ ಜಾಗದಲ್ಲಿದ್ದು, ಅತಿ ಹೆಚ್ಚು ಒಣಗಿದ ಮರಗಳಿವೆ. ಆಕಸ್ಮಿಕ ಬೆಂಕಿಯನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿಶಾಮ ದಳಕ್ಕೆ ಮಾಹಿತಿ ಮುಟ್ಟಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ದುರುಂತದ ಸ್ಥಳದಲ್ಲಿ ಪಕ್ಷಿಗಳು ಗೂಡುಗಳನ್ನು ಕಟ್ಟಿ ಮರಿಗಳು ಹಾಗೂ ಮೊಟ್ಟೆಗಳು ಇಟ್ಟಿದ್ದವು. ಬೆಂಕಿ ಅನಾಹುತದಿಂದ ಪಕ್ಷಿಗಳು ಸ್ಥಳದಲ್ಲೇ ಕಿರುಚಾಡುವುದು ಹೆಚ್ಚಾಗಿ ಕೇಳಿ ಬಂದಿತು.