ಭೈರವೈಕ್ಯರ ಆಶಯದಂತೆ ಶಿಕ್ಷಣ ದೇಶದ ಆಸ್ತಿಯಾಗಬೇಕು: ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯ

| Published : Jan 18 2025, 12:45 AM IST

ಭೈರವೈಕ್ಯರ ಆಶಯದಂತೆ ಶಿಕ್ಷಣ ದೇಶದ ಆಸ್ತಿಯಾಗಬೇಕು: ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಮುಖಂಡ ಐ.ಬಿ.ಅಣ್ಣಯ್ಯ ಮಾತನಾಡಿದರು. ಚುಂಚಶ್ರೀ ಪುತ್ಥಳಿಗೆ ಪುಷ್ಪನಮನ ಅರ್ಪಿಸಿ ಸ್ಮರಿಸಲಾಯಿತು. ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಭೈರವೈಕ್ಯ ಚುಂಚಶ್ರೀ ಆಶಯದಂತೆ ಶಿಕ್ಷಣ ದೇಶದ ಭವಿಷ್ಯದ ಮಕ್ಕಳ ಆಸ್ತಿಯಾಗಬೇಕಿದೆ ಎಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಜೆ.ಎನ್. ರಾಮಕೃಷ್ಣೇಗೌಡ ಹೇಳಿದರು.

ಐಕನಹಳ್ಳಿ ಆದಿಚುಂಚನಗಿರಿ ಸಂಸ್ಥೆ ಬಸವೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಭೈರವೈಕ್ಯ ಚುಂಚಶ್ರೀ 81ನೇ ಜಯಂತ್ಯುತ್ಸವ, 12ನೇ ಪುಣ್ಯ ಸಂಸ್ಮರಣೋತ್ಸವದಲ್ಲಿ ಮಾತನಾಡಿ, ಬೆಂಗಾಡಿನಂತಿದ್ದ ಆದಿಚುಂಚನಗಿರಿ ಕ್ಷೇತ್ರವನ್ನು ಹಸಿರುಮಯವಾಗಿಸಿ ನಾಡಿಗೆ ಅಕ್ಷರ, ಅನ್ನ, ಆರೋಗ್ಯ, ವನಸಂವರ್ಧನೆಯಂಥ ದಾಸೋಹವನ್ನು ಅಕ್ಷಯದಂತೆ ಅರ್ಪಿಸಿದ ಯುಗಯೋಗಿ ಬಾಲಗಂಗಾಧರನಾಥ ಸ್ವಾಮೀಜಿ ನಾಡಿನ ದಿವ್ಯಚೇತನರಾಗಿದ್ದಾರೆ ಎಂದರು.

ಕನ್ನಡ ಶಾಲೆ, ಸರ್ಕಾರಿ ಶಾಲೆ ಉಳಿದರೆ ಮಾತ್ರ ಭಾಷೆ ಉಳಿಯಲಿದೆ. ಕನ್ನಡ ನಾಡು, ಸಂಸ್ಕೃತಿಗೆ ಮೊದಲು ಇಂಗ್ಲಿಷ್ ವ್ಯಾಮೋಹವನ್ನು ಪೋಷಕರು ಬಿಡಬೇಕಿದೆ. ಗುಣಾತ್ಮಕ ಶಿಕ್ಷಣದೊಂದಿಗೆ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆ ಉತ್ತಮ ಫಲಿತಾಂಶ ನೀಡಿದೆ ಎಂದು ತಿಳಿಸಿದರು.

ಇಷ್ಟಾದರೂ ದಾಖಲಾತಿ ಕೊರತೆ ಕಾಡುತ್ತಿರುವುದು ಅಚ್ಚರಿ. ಇದು ಉಚಿತ ಶಾಲೆ ಎಂಬುದನ್ನು ರೈತಾಪಿ ವರ್ಗದವರಿಗೆ ತಿಳಿಸಬೇಕು. ಬಿಜಿಎಸ್ ನೊಂದವರ ಬದುಕಿಗೆ ಆಶಾಕಿರಣ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಗ್ರಾಮ ಮುಖಂಡ ಐ.ಬಿ.ಅಣ್ಣಯ್ಯ ಮಾತನಾಡಿದರು. ಚುಂಚಶ್ರೀ ಪುತ್ಥಳಿಗೆ ಪುಷ್ಪನಮನ ಅರ್ಪಿಸಿ ಸ್ಮರಿಸಲಾಯಿತು. ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಿ.ಎಂ.ನಾಗರಾಜು, ದ್ಯಾವೇಗೌಡ, ಸುನಿಲ್, ಮುಖ್ಯಶಿಕ್ಷಕ ಐ.ಆರ್. ಶ್ರೀಧರ್, ಹನುಮಂತೇಗೌಡ, ನಾಗೇಶ್, ಎಚ್.ಬಿ. ನಂಜುಂಡಸ್ವಾಮಿ, ಕೋಮಲ ಇದ್ದರು.