ಠಾಣೆಗೆ ನುಗ್ಗಿ ಪಿಎಸ್ ಐ ಜೊತೆ ಅಸಭ್ಯ ವರ್ತನೆ: ಆರೋಪಿ ಬಂಧನ

| Published : Jul 10 2025, 12:48 AM IST

ಠಾಣೆಗೆ ನುಗ್ಗಿ ಪಿಎಸ್ ಐ ಜೊತೆ ಅಸಭ್ಯ ವರ್ತನೆ: ಆರೋಪಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಈತ ಪೊಲೀಸ್ ಠಾಣೆಯ ತಮ್ಮ ಕೊಠಡಿಯಲ್ಲಿ ರಾತ್ರಿ ವೇಳೆ ಪಿಎಸ್ಐ ಊಟ ಮಾಡುತ್ತಿದ್ದಾಗ ಏಕಾಏಕಿ ಒಳ ನುಗ್ಗಿ, ನನ್ನನ್ನು ಠಾಣೆಗೆ ಬರಹೇಳಿದ್ದು ಯಾಕೆ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ್ದಾನೆ.

ಕೊಳ್ಳೇಗಾಲ: ಪಟ್ಟಣ ಪೊಲೀಸ್ ಠಾಣೆಗೆ ನುಗ್ಗಿ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವರ್ಷಾ ಜತೆ ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ. ನಗರಸಭೆ ಮಾಜಿ ಸದಸ್ಯ ಕೆ.ಕೆ. ಮೂರ್ತಿ ಅವರ ಪುತ್ರ ದುಶ್ಯಂತ(20) ಬಂಧಿತ ಆರೋಪಿ. ಈತ ಪೊಲೀಸ್ ಠಾಣೆಯ ತಮ್ಮ ಕೊಠಡಿಯಲ್ಲಿ ರಾತ್ರಿ ವೇಳೆ ಪಿಎಸ್ಐ ಊಟ ಮಾಡುತ್ತಿದ್ದಾಗ ಏಕಾಏಕಿ ಒಳ ನುಗ್ಗಿ, ನನ್ನನ್ನು ಠಾಣೆಗೆ ಬರಹೇಳಿದ್ದು ಯಾಕೆ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ್ದಾನೆ, ಈ ಕುರಿತು ಸಿಬ್ಬಂದಿ ವಿಡಿಯೋ ಮಾಡಿಕೊಳ್ಳುವಾಗ ಮೊಬೈಲ್ ಅನ್ನು ಕಿತ್ತುಕೊಂಡು ಗಲಾಟೆ ಮಾಡಿದ್ದಾನೆ. ಈ ಬಗ್ಗೆ ಎಸ್ಐ ವರ್ಷಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಸಂಬಂಧ ಆರೋಪಿಯನ್ನು ಮೈಸೂರಿನ ಹಿನಕಲ್ ನಲ್ಲಿ ಬಂಧಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.