ಇಂಜನಿಯರ್ ವಿದ್ಯಾರ್ಥಿಯೊಬ್ಬರು ಉದ್ಯೋಗಕ್ಕಾಗಿ ನೌಕರಿ, ಕಾಂ. ಆಪ್ ಅರ್ಜಿ ಸಲ್ಲಿಸಿದ್ದರು. ಈ ವಿವರಗಳನ್ನು ಕದ್ದು ಇಂಜನಿಯರಿಂಗ್ ವಿದ್ಯಾರ್ಥಿಯನ್ನು ಸಂರ್ಪಕಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷಕ್ಕೆ ಒಳಪಡಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರವಿವಿಧ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಂದ ಲಕ್ಷಾಂತರ ರು. ವಸೂಲಿ ಮಾಡುತ್ತಿದ್ದ ಆಂಧ್ರ ಪ್ರದೇಶದ ಕಡಪ ಮೂಲಕ ಬಿಟೆಕ್ ಪದವೀಧರ ಸುನಿಲ್ ಕುಮಾರ್ ರೆಡ್ಡಿಯನ್ನು ಕೋಲಾರದ ಪೊಲೀಸರು ಬಂಧಿಸಿದ್ದಾರೆ. ನಗರದ ಇಂಜನಿಯರ್ ವಿದ್ಯಾರ್ಥಿಯೊಬ್ಬರು ಉದ್ಯೋಗಕ್ಕಾಗಿ ನೌಕರಿ, ಕಾಂ. ಆಪ್ ಅರ್ಜಿ ಸಲ್ಲಿಸಿದ್ದರು. ಈ ವಿವರಗಳನ್ನು ಕದ್ದು ಇಂಜನಿಯರಿಂಗ್ ವಿದ್ಯಾರ್ಥಿಯನ್ನು ಸಂರ್ಪಕಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷಕ್ಕೆ ಒಳಪಡಿಸಿ 23.20 ಲಕ್ಷ ರು. ಹಾಗೂ ದೇಶಾದ್ಯಂತ ನೌಕರಿ. ಕಾಂ ಮತ್ತು ಲಿಕೆಡಿನ್ ವೆಬ್‌ಸೆಟ್‌ಗಳಲ್ಲಿ ಉದ್ಯೋಗ ಹುದ್ದೆಗಳ ರೆಜ್ಯೋಮ್‌ಗಳನ್ನು ಆಪ್‌ಲೋಡ್ ಮಾಡುತ್ತಿದ್ದು ಸಾರ್ವಜನಿಕರ ಡೇಟಾಗಳನ್ನು ಪಡೆದು ಅವರ ಮೊಬೈಲ್‌ಗಳಿಗೆ ಕರೆ ಮಾಡಿ ನಕಲಿ ಜಿ-ಮೇಲ್ ಐ.ಡಿ.ಗಳ ಮೂಲಕ ಸಂಪರ್ಕಿಸುತ್ತಿದ್ದನು. ಅವರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಹೆಚ್ಚು ವೇತನ ಸಿಗುವ ಕೆಲಸ ಕೊಡಿಸುವುದಾಗಿ ಅಮಿಷಕ್ಕೆ ಒಳಪಡಿಸಿ ನಂಬಿಸಿದ ನಂತರ ಅವರಿಂದ ಹಣ ವರ್ಗಾವಣೆ ಮಾಡಿ ಕೊ೦ಡು ವಂಚಿಸುವ ದಂಧೆ ಮಾಡುತ್ತಿರುವುದು ಆರೋಪಿಯ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಕೋಲಾರದ ಸಿ.ಐ.ಎನ್. ಪೊಲೀಸ್ ಠಾಣಾ ಉಪಾಧೀಕ್ಷಕ ಆರ್.ರಾಜೇಶ್ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ಜಗದೀಶ್ ಮತ್ತು ಠಾಣಾ ಸಿಬ್ಬಂದಿ ಆಂಜನಪ್ಪ, ಕುಮಾರ್, ಶಂಕರಪ್ಪ, ಸಂತೋಷ್ ಕಾರ್ಯಾಚರಣೆಯಲ್ಲಿ ಇದ್ದರು.